ಸೋಫಿಯಾ ಹಯಾತ್, ರೋಹಿತ್ ಶರ್ಮಾ
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಇತ್ತೀಚೆಗೆ ಪತ್ನಿ ರಿತಿಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಂದೆಯಾದ ಖುಷಿಯಲ್ಲಿ ತೇಲಾಡುತ್ತಿರುವ ರೋಹಿತ್ ಶರ್ಮಾಗೆ ಮಾಜಿ ಗೆಳತಿ ಶಾಕ್ ನೀಡಿದ್ದಾರೆ.
ಬ್ರಿಟಿಷ್ ಮಾಡಲ್ ಕಮ್ ನಟಿ ಸೋಫಿಯಾ ಹಯಾತ್, ರೋಹಿತ್ ರ ಚೆಂದದ ಸಂಸಾರದಲ್ಲಿ ಹುಳಿ ಹಿಂಡುವ ಮಾತುಗಳನ್ನಾಡಿದ್ದಾರೆ. ರೋಹಿತ್ ಶರ್ಮಾ ಹಾಗೂ ನಾನು ಡೇಟಿಂಗ್ ಮಾಡಿದ್ವಿ ಎಂದು ಹೇಳಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಲಂಡನ್ ನ ಕ್ಲಬ್ ವೊಂದರಲ್ಲಿ ನನ್ನ ಫ್ರೆಂಡ್ ಒಬ್ಬರು ರೋಹಿತ್ ರನ್ನು ಪರಿಚಯಿಸಿದ್ದರು. ನನಗೆ ಮೊದಲು ರೋಹಿತ್ ಯಾರು ಅಂತ ಗೊತ್ತಿರಲಿಲ್ಲ. ಪರಸ್ಪರ ಪರಿಚಯವಾದ ಮೇಲೆ ರೋಹಿತ್ ಹಾಗೂ ನಾನು ಕ್ಲಬ್ ನಲ್ಲಿ ಯಾರು ಇಲ್ಲದ ಜಾಗಕ್ಕೆ ಹೋಗಿ ಕೆಲಹೊತ್ತು ಕಳೆದಿದ್ದೇವು. ಹೀಗೆ ಮಾತಾಡುತ್ತಿದ್ದಾಗಲೇ ರೋಹಿತ್ ನನಗೆ ಕಿಸ್ ಮಾಡಿದ್ದ ಎಂದು ಸೋಫಿಯಾ ಹೇಳಿರುವುದಾಗಿ ಐಬಿಟೈಮ್ಸ್ ವರದಿ ಮಾಡಿದೆ.
2012ರಲ್ಲಿ ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದ ಸೋಫಿಯಾ ಹಯಾತ್ ಇದೀಗ 7 ವರ್ಷಗಳ ಬಳಿಕ ತಮ್ಮ ಮತ್ತು ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ್ದಾರೆ. ಇನ್ನು 2017ರಲ್ಲಿ ಸೋಫಿಯಾ ರೋಹಿತ್ ರನ್ನು ಟ್ವೀಟರ್ ನಲ್ಲಿ ಬ್ಲಾಕ್ ಮಾಡಿರುವುದಾಗಿ ಟ್ವೀಟ್ ಮಾಡಿದ್ದರು.