2019 ರ ಐಪಿಎಲ್ ವೇಳೆಗೆ ಸಂಪೂರ್ಣವಾಗಿ ತಯರಾಗುವೆ: ಗಾಯಗೊಂಡ ಕ್ರಿಕೆಟಿಗ ಪೃಥ್ವಿ ಶಾ
ಐಪಿಎಲ್-2019 ಪ್ರಾರಂಭವಾಗುವ ವೇಳೆಗೆ ಸಂಪೂರ್ಣವಾಗಿ ತಯಾರಾಗುವೆ ಎಂದು ಗಾಯಗೊಂಡಿರುವ ಯುವ ಕ್ರಿಕೆಟಿಗ ಪೃಥ್ವಿ ಶಾ ಹೇಳಿದ್ದಾರೆ.
ನವದೆಹಲಿ: ಐಪಿಎಲ್-2019 ಪ್ರಾರಂಭವಾಗುವ ವೇಳೆಗೆ ಸಂಪೂರ್ಣವಾಗಿ ತಯಾರಾಗುವೆ ಎಂದು ಗಾಯಗೊಂಡಿರುವ ಯುವ ಕ್ರಿಕೆಟಿಗ ಪೃಥ್ವಿ ಶಾ ಹೇಳಿದ್ದಾರೆ.
ಇಂಡಿಯಾ ಟುಡೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪೃಥ್ವಿ ಶಾ, ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಪಾದದ ಕೀಲು ಗಾಯಕ್ಕೊಳಗಾಗಿದ್ದರಿಂದ ಸರಣಿಯಲ್ಲಿ ಆಡಲು ಆಗಿರಲಿಲ್ಲ. "ಅಶ್ವಿನ್ ಬೌಲಿಂಗ್ ಮಾಡುತ್ತಿದ್ದರು. ಕ್ಯಾಚ್ ಬಂದಿತು. ಹಿಂಭಾಗಕ್ಕೆ ಜಿಗಿದು ಕ್ಯಾಚ್ ಹಿಡಿದು ಕೆಳಗೆ ನಿಂತಾಗ ದೇಹದ ಸಂಪೂರ್ಣ ತೂಕ ಬಲಭಾಗದ ಕಾಲಿನ ಮೇಲೆ ಬಿತ್ತು. ಪಾದದ ಕೀಲು ತಿರುಚಿಕೊಂಡಿತು ಎಂದು ಪೃಥ್ವಿ ಶಾ ಗಾಯಗೊಂಡಿದ್ದನ್ನು ಸಂದರ್ಶನದಲ್ಲಿ ವಿವರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸವಾಲಿನ ಪರಿಸ್ಥಿತಿಯಲ್ಲಿ ಆಡಬೇಕೆಂಬುದು ನನ್ನ ಬಯಕೆಯಾಗಿತ್ತು. ಆದರೆ ಅದು ಗಾಯದ ಸಮಸ್ಯೆಯಿಂದ ಸಾಧ್ಯವಾಗಲಿಲ್ಲ. ಆದರೆ 2019 ರ ಐಪಿಎಲ್ ವೇಳೆಗೆ ಸಂಪೂರ್ಣವಾಗಿ ಗಾಯದ ಸಮಸ್ಯೆಯಿಂದ ಹೊರಬಂದು ತಯಾರಾಗುವೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.