ನೇಪಿಯರ್: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ವಿಕೆಟ್ ಹಿಂದೆಗಡೆ ನಿಂತು ಮಾಸ್ಟರ್ ಪ್ಲ್ಯಾನ್ ಗಳಿಗೆ ಯಾರು ಸರಿಸಾಟಿ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 37ರ ಹರೆಯದ ಧೋನಿ ಯುವ ಬೌಲರ್ ಗಳ ಪ್ರಭಾವಿ ನಿರ್ವಹಣೆಯಲ್ಲಿ ಅಮೂಲ್ಯ ಪಾತ್ರ ವಹಿಸುತ್ತಿದ್ದಾರೆ. ಕುಲದೀಪ್ ಯಾದವ್ ಅವರಿಗೆ ಧೋನಿ ವಿಕೆಟ್ ಹಿಂದುಗಡೆ ನಿಂತು ಸಲಹೆಗಳನ್ನು ನೀಡುತ್ತಿದ್ದಾರೆ.
ನ್ಯೂಜಿಲ್ಯಾಂಡ್ ಬ್ಯಾಟ್ಸ್ ಮನ್ ಹೊರದಬ್ಬಲು ಮಾಸ್ಟರ್ ಪ್ಲ್ಯಾನ್ ರೂಪಿಸುವ ಮೂಲಕ ಧೋನಿ ಮಗದೊಮ್ಮೆ ಗಮನ ಸೆಳೆದಿದ್ದಾರೆ. ಅದು ಕುಲದೀಪ್ ಯಾದವ್ ಅವರ 10ನೇ ಓವರ್ ನ ಕೊನೆಯ ಎಸೆತ ವಾಗಿತ್ತು. ಇದಾಗಲೇ ಮೂರು ವಿಕೆಟ್ ಪಡೆದಿದ್ದ ಕುಲದೀಪ್ ಧೋನಿ ಹೇಳಿದಂತೆ ಬೌಲಿಂಗ್ ಮಾಡಿದ್ದು ಬೌಲ್ಟ್ ಔಟ್ ಆಗಿ ಪೆವಿಲಿಯನ್ ಸೇರಿದರು.
ಬ್ಯಾಟ್ಸ್ ಮನ್ ಕಣ್ಣು ಮುಚ್ಚಿ ಡಿಫೆಂಡ್ ಆಡಲಿದ್ದಾನೆ. ಕುಲದೀಪ್ ನೀನು ಈ ಕಡೆಯಿಂದ ಬೌಲಿಂಗ್ ಮಾಡು. ಇದಕ್ಕಾಗಿಯೇ ಮೊದಲ ಸ್ಲಿಪ್ ನಲ್ಲಿ ರೋಹಿತ್ ಶರ್ಮಾರನ್ನು ನಿಲ್ಲಿಸಿದ್ದರು. ಧೋನಿ ಯೋಜನೆಯಂತೆ ರೌಂಡ್ ದಿ ವಿಕೆಟ್ ನಿಂದ ಕುಲದೀಪ್ ದಾಳಿ ನಡೆಸಿದರು. ಕಿವೀಸ್ ಬ್ಯಾಟ್ಸ್ ಮನ್ ಬೌಲ್ಟ್ ಆಡಿದ ಚೆಂಡು ನೆರವಾಗಿ ಸ್ಲಿಪ್ ನಲ್ಲಿದ್ದ ರೋಹಿತ್ ಶರ್ಮಾ ಕೈ ಸೇರಿತು. ಬಳಿಕ ಕುಲದೀಪ್ ಗೆ ಕೈ ಸನ್ನೆ ಮಾಡುವ ಮೂಲಕ ಧೋನಿ ಸಂಭ್ರಮವನ್ನು ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics