ನೇಪಿಯರ್: ನ್ಯೂಜಿಲ್ಯಾಂಡ್ ಆಟಗಾರ ಟ್ರೆಂಟ್ ಬೋಲ್ಟ್ ಆಟ ಕಂಡು ರೋಹಿತ್ ಶರ್ಮಾ ನಗು ತಡೆಯಲಾಗದೆ ಮೈದಾನದಲ್ಲೇ ನಕ್ಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಮೈದಾನಕ್ಕೆ ಬಂದ ಬೋಲ್ಟ್ ಚಹಾಲ್ ಬೌಲಿಂಗ್ ನಲ್ಲಿ ವಿಚಿತ್ರವಾಗಿ ಆಡಿದ್ದು ಮೊದಲ ಸ್ಪಿಪ್ ನಲ್ಲಿದ್ದ ರೋಹಿತ್ ಶರ್ಮಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಟ್ರೆಂಟ್ ಬೋಲ್ಟ್ ಒಟ್ಟಾರೆ 10 ಎಸೆತಗಳನ್ನು ಎದುರಿಸಿದ್ದು ಕೇವಲ 1 ರನ್ ಗಳಿಸಿ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಔಟಾಗಿದ್ದರು.