ಕ್ರಿಕೆಟ್

ಆಲ್ ರೌಂಡರ್ ಆಂಡಿಲೆ ವಿರುದ್ಧ ಜನಾಂಗೀಯ ನಿಂದನೆ: ಪಾಕಿಸ್ತಾನದ ಸರ್ಫರಾಜ್ ಕ್ಷಮೆಯಾಚನೆ

Nagaraja AB

ನವದೆಹಲಿ: ಡರ್ಬನ್ ನಲ್ಲಿ  ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್  ಆಂಡಿಲೆಗೆ  ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನದ ಕ್ಯಾಪ್ಟನ್ ಸರ್ಫರಾಜ್  ಅಹ್ಮದ್  ಕ್ಷಮೆ ಕೋರಿದ್ದಾರೆ.

ಜನವರಿ 22 ರಂದು ಡರ್ಬನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕ್ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಉರ್ದುವಿನಲ್ಲಿ ಆಂಡಿಲೆಯನ್ನು 'ಲೇ ಕರಿಯ..ನಿನ್ನ ಅಮ್ಮ ಇವತ್ತು ಎಲ್ಲಿ ಕೂತಿದ್ದಾಳೆ, ಇವತ್ತು ಏನ್ ಪ್ರಾರ್ಥನೆ ಮಾಡಿ ಬಂದಿದ್ದೀಯಾ? ಎಂದು ಹೇಳಿದ್ದು ಈ ಮಾತುಗಳು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿತ್ತು. ಈ ವಿಡಿಯೋ ಈಗ ಭಾರಿ ಚರ್ಚೆಗೆ ಕಾರಣವಾಗಿತ್ತು.

ಇದರಿಂದಾಗಿ  ಸರ್ಫರಾಜ್  ಟ್ವೀಟರ್ ಮೂಲಕ ಕ್ಷಮೆ ಕೋರಿದ್ದಾರೆ. ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿರುವಂತೆ ನನ್ನ ಹೇಳಿಕೆಯಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಅವರು ಹೇಳಿದ್ದಾರೆ.
ಯಾರೊ ಒಬ್ಬರನ್ನು ಗುರಿಯಾಗಿಟ್ಟುಕೊಂಡು ಈ ಹೇಳಿಕೆ ನೀಡಿಲ್ಲ. ನಾನು ಹೇಳಿದ ಪದಗಳು ಸರಿಯಾಗಿ ಕೇಳುತ್ತಿಲ್ಲ,  ಅರ್ಥವಾಗುತ್ತಿಲ್ಲ. ಇನ್ನೂ ಮುಂದಿನ ದಿನಗಳಲ್ಲಿ ಮೈದಾನದಲ್ಲಿ ಎದುರಾಳಿ ರಾಷ್ಟ್ರದ ಆಟಗಾರರಿಗೆ ಗೌರವ ನೀಡಿ ಆಟ ಆಡುವುದಾಗಿ ಟ್ವೀಟ್ ಮಾಡಿದ್ದಾರೆ.
SCROLL FOR NEXT