ಕ್ರಿಕೆಟ್

ಗೊಂದಲದಲ್ಲಿ ಟೀಂ ಇಂಡಿಯಾ: ವಿಶ್ವಕಪ್ ಆಡುವ 11ರಲ್ಲಿ ಯಾರಾಡ್ತಾರೇ ಹಾರ್ದಿಕ್ ಅಥವಾ ಭುವನೇಶ್ವರ್!

Vishwanath S
2019ರ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು ಈ ಮಧ್ಯೆ ಟೀಂ ಇಂಡಿಯಾದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ವಿಶ್ವಕಪ್ ಆಡುವ 11ರ ಬಳಗವನ್ನು ಆಯ್ಕೆ ಮಾಡುವುದು ಟೀಂ ಇಂಡಿಯಾಗೆ ಕೊಂಚ ಕಷ್ಟವಾಗುತ್ತಿದೆ.
ಹೌದು, ನಿಷೇಧದ ಬಳಿಕ ತಂಡಕ್ಕೆ ವಾಪಸ್ಸಾಗಿರುವ ಹಾರ್ದಿಕ್ ಪಾಂಡ್ಯ ನ್ಯೂಜಿಲ್ಯಾಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿರುವುದರಿಂದ ತಂಡಕ್ಕೆ ಹಾರ್ದಿಕ್ ಅವಶ್ಯಕತೆ ಹೆಚ್ಚಿದೆ. ಇನ್ನು ಭುವನೇಶ್ವರ್ ಕುಮಾರ್ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 
ಆದರೆ ತಂಡದಲ್ಲಿ ಆಲ್ರೌಂಡರ್ ವಿಷಯಕ್ಕೆ ಬಂದರೆ ಸದ್ಯದ ಮಟ್ಟಿಗೆ ಯಾರು ತಂಡದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡುತ್ತಿಲ್ಲ. ಅಲ್ಲಿಗೆ ಹಾರ್ದಿಕ್ ಪಾಂಡ್ಯಗೆ ಆಯ್ಕೆ ಸಮಿತಿ ಹೆಚ್ಚು ಒತ್ತು ನೀಡುತ್ತಿದೆ. ಇನ್ನು ನಾಳಿನ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ಫಿಟ್ ಆಗಿದ್ದರೆ ಅವರಿಗೆ ಛಾನ್ಸ್ ನೀಡಿ ಭುವನೇಶ್ವರ್ ಕುಮಾರ್ ಬೇಂಚ್ ಕಾಯಬೇಕಾಗುತ್ತದೆ. 
ಇನ್ನು ಮೊಹಮ್ಮದ್ ಶಮಿ ಸಹ ಮಾರಕ ಬೌಲಿಂಗ್ ದಾಳಿ ನಡೆಸುತ್ತಿರುವುದು ಆಯ್ಕೆ ಸಮಿತಿಗೆ ಚಿಂತೆಗೀಡು ಮಾಡಿದೆ. ಇನ್ನು ಸ್ಪಿನ್ ಬೌಲಿಂಗ್ ನಲ್ಲಿ ಯಜುವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಉತ್ತಮವಾಗಿ ಆಡುತ್ತಿರುವುದು ಅವರಿಬ್ಬರು ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. 
ಇನ್ನು ಬೇಕಿರುವ ಮೂವರು ವೇಗಿಗಳ ಪೈಕಿ ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಆಡುವ ಸಾಧ್ಯತೆ ಇದ್ದು ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ನೀಡಿದರೆ ಭುವನೇಶ್ವರ್ ಕುಮಾರ್ ಆಡುವ 11ರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದೆ.
SCROLL FOR NEXT