ಲಂಡನ್: 38ನೇ ವಸಂತಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್ ಧೋನಿ ಅವರಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಶುಭಾಶಯ ಕೋರಿದ್ದು, ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್ ಎಂದು ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ನ ರೂಪುರೇಷೆಯನ್ನೇ ಬದಲಿಸಿದ ಟೀಂ ಇಂಡಿಯಾ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನುಮ ದಿನವಾಗಿದ್ದು, 38ನೇ ವಸಂತಕ್ಕೆ ಕಾಲಿಟ್ಟ ಮಾಹಿಗೆ ದೇಶಾದ್ಯಂತ ಶುಭಾಶಯಗಳ ಸುರಿಮಳೆಗೈಯ್ಯಲಾಗುತ್ತಿದೆ.
ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮ ಅಚ್ಚುಮೆಚ್ಚಿನ ನಾಯಕನಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದು, ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್, ಹ್ಯಾಪಿ ಬರ್ತ್ ಡೇ ಮಾಹಿ ಭಾಯ್ ಎಂದು ಶುಭ ಕೋರಿದ್ದಾರೆ.
'ನಂಬಿಕೆ ಮತ್ತು ಗೌರವಗಳನ್ನು ಸರಿಯಾಗಿ ಅರ್ಥೈಸಿಕೊಂಡವರ ಕೆಲವೇ ಕೆಲವು ವ್ಯಕ್ತಿಗಳಲ್ಲಿ ನೀವು ಪ್ರಮುಖರು. ನಿಮ್ಮಂತಹ ಶ್ರೇಷ್ಠ ವ್ಯಕ್ತಿ ಮತ್ತು ವ್ಯಕ್ತಿತ್ವದೊಂದಿಗೆ ಸಾಕಷ್ಟು ವರ್ಷಗಳಿಂದ ಸ್ನೇಹ ಹೊಂದಿರುವುದಕ್ಕೆ ಸಂತೋಷವಿದೆ. ನಮ್ಮಲ್ಲೆರಿಗೂ ನೀವು ಹಿರಿಯಣ್ಣ ಇದ್ದಂತೆ. ಈ ಹಿಂದೆಯೂ ಕೂಡ ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಮುಂದೆಯೂ ಹೇಳುತ್ತೇನೆ. ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್, ಹ್ಯಾಪಿ ಬರ್ತ್ ಡೇ ಮಾಹಿ ಭಾಯ್ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics