ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸ್ 
ಕ್ರಿಕೆಟ್

ದಶಕದ ನಂತರ 'ಮಹಾಕಾಳಗ'ದಲ್ಲಿ ಮತ್ತೆ ಮುಖಾಮುಖಿಯಾಗುತ್ತಿರುವ ಕೊಹ್ಲಿ, ಕೇನ್ ವಿಲಿಯಮ್ಸ್

2008ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಸೆಮಿಫೈನಲ್ ನಂತರ ಇದೀಗ ಮತ್ತೊಂದು ಮಹಾಕಾಳಗದಲ್ಲಿ ವಿರಾಟ್ ಕೊಹ್ಲಿ ಹಾಗೂ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸ್ ಮುಖಾಮುಖಿಯಾಗುತ್ತಿದ್ದಾರೆ.

ಲಂಡನ್ :  ನಾಳೆ ನಡೆಯಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭಾರತ ತಂಡ ಸೆಣಸಲಿದೆ.  
2008ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್  ಸೆಮಿಫೈನಲ್ ನಂತರ ಇದೀಗ ಮತ್ತೊಂದು ಮಹಾಕಾಳಗದಲ್ಲಿ ವಿರಾಟ್ ಕೊಹ್ಲಿ ಹಾಗೂ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸ್  ಮುಖಾಮುಖಿಯಾಗುತ್ತಿದ್ದಾರೆ.
ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ  ತಂಡವಾಗಿದ್ದರೆ, ನ್ಯೂಜಿಲ್ಯಾಂಡ್ ಕೂಡಾ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದೆ ಗೆಲ್ಲಬೇಕೆಂದು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ನಾಳಿನ ಸೆಮಿ ಫೈನಲ್ ಪಂದ್ಯ ಉಭಯ ರಾಷ್ಟ್ರಗಳ ಕ್ರೀಡಾಭಿಮಾನಿಗಳ ರಸದೌತಣ ಉಣಬಡಿಸಲಿದೆ.
ಲೀಗ್ ಹಂತದಲ್ಲಿ ಕಿವೀಸ್ - ಭಾರತ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ವಿಶ್ವಕಪ್ ಟೂರ್ನಿಯಲ್ಲಿ  ಉಭಯ ತಂಡಗಳು ಸೆಮಿಫೈನಲ್ ನಲ್ಲಿ ಎದುರಾಗುತ್ತಿವೆ. ಆದರೆ. ವಿಶ್ವಕಪ್  ಸೆಮಿಫೈನಲ್ ನಲ್ಲಿ ಕೊಹ್ಲಿ ಹಾಗೂ ಕೇನ್ ಮುಖಾಮುಖಿಯಾಗುತ್ತಿರುವುದು ಇದೇ ಮೊದಲೇನಲ್ಲಾ, 2008ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ 19 ವರ್ಷದೊಳಗಿನ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿ ಫೈನಲ್ ನಲ್ಲೂ  ಈ ದಿಗ್ಗಜ ಆಟಗಾರರು ಮುಖಾಮುಖಿಯಾಗಿದ್ದರು. ಅಂದಿನ ಪಂದ್ಯದಲ್ಲಿ ಕೊಹ್ಲಿ 43 ರನ್ ಗಳಿಸುವುದರ ಜೊತೆಗೆ ಪ್ರಮುಖ ಎರಡು ವಿಕೆಟ್ ಗಳನ್ನು ಪಡೆದುಕೊಂಡಿದ್ದರು. ಅಲರೌಂಡರ್ ಆಟವಾಡಿದ್ದ ಕೊಹ್ಲಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದರು.
ಸೆಮಿ ಫೈನಲ್ ಪಂದ್ಯದಲ್ಲಿ ಡೆಕ್ವರ್ತ್  ಲೂಯಿಸ್  ನಿಯಮದ ಪ್ರಕಾರ ಭಾರತ ತಂಡ ಮೂರು ವಿಕೆಟ್ ಗಳಿಂದ ಜಯಗಳಿಸಿತ್ತು. ಫೈನಲ್ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ 12 ರನ್ ಗಳಿಂದ ಗೆಲುವು ಸಾಧಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. 11 ವರ್ಷಗಳ ಹಿಂದೆ ನಡೆದ ಪಂದ್ಯದಲ್ಲಿ  ನ್ಯೂಜಿಲ್ಯಾಂಡ್ ತಂಡದ ಟ್ರೆಂಟ್  ಬೌಲ್ಟ್,  ತಿಮ್ ಸೌಥಿ,  ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡಾ ಪಾಲ್ಗೊಂಡಿದ್ದರು.
ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ ಗೆಲುವಿನ ಮೂಲಕ ಅಗ್ರಸ್ಥಾನದಲ್ಲಿರುವ ಭಾರತ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಕಿವೀಸ್ ಸೆಮಿ ಫೈನಲ್ ಪಂದ್ಯದಲ್ಲಿ ಪರಸ್ಪರ ಎದುರಾಳಿಯಾಗಿವೆ. ಉಭಯ ತಂಡಗಳಲ್ಲಿಯೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಉತ್ತಮವಾಗಿದ್ದು, ಗೆಲುವಿಗಾಗಿ ಪರಸ್ಪರ ಪೈಪೋಟಿ ನೀಡಲು ತಯಾರಾಗುತ್ತಿವೆ. ಆದರೆ, ಯಾವ ತಂಡ ಸೆಮಿಸ್ ಗೆದ್ದು ಪೈನಲ್ ಗೆ ಲಗ್ಗೆ ಇಡಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT