ಲಂಡನ್: ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಇಂದು ಆರಂಭವಾಗಿದ್ದು, ನ್ಯೂಜಿಲೆಂಡ್ ತಂಡ ತನ್ನ ಕೊನೆಯ ಹಂತದ ಬ್ಯಾಟಿಂಗ್ ಮುಂದುವರೆಸಿದೆ.
ನಿನ್ನೆ ಮಳೆಯ ಬಂದಾಗ ನ್ಯೂಜಿಲೆಂಡ್ ತಂಡ 46.1 ಓವರ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತ್ತು. ಇಂದು ಆಟ ಮುಂದುವರೆದಿದ್ದು, ಅಂತಿಮ ಹಂತದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಕಿವೀಸ್ ಆಟಗಾರರನ್ನು ಭಾರತೀಯ ಬೌಲರ್ ಗಳ ಕಟ್ಟಿಹಾಕುವ ಯತ್ನ ನಡೆಸಿದ್ದಾರೆ. ಪರಿಣಾಮ ನಿನ್ನೆ ಅರ್ಧಶತಕ ಸಿಡಿಸಿ ಕ್ರೀಸ್ ನಲ್ಲಿದ್ದ ರಾಸ್ ಟೇಲರ್ ಇಂದು ಬುಮ್ರಾ ಬೌಲಿಂಗ್ ನಲ್ಲಿ ಔಟಾಗಿದ್ದು, ಅವರ ಹಿಂದೆಯೇ ಲಾಥಮ್ ಕೂಡಭುವಿ ಬೌಲಿಂಗ್ ನಲ್ಲಿ ಔಟ್ ಆಗಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ನ್ಯೂಜಿಲೆಂಡ್ ತಂಡ 49 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು.