ಕ್ರಿಕೆಟ್

'ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್': ಸ್ಟೀವ್‌ ವಾ

Srinivasamurthy VN
ಲಂಡನ್: ಭಾರತದ ಮಹೇಂದ್ರ ಸಿಂಗ್ ಧೋನಿ ಸಾಮರ್ಥ್ಯವೇನು ಎಂಬುದು ನನಗೆ ತಿಳಿದಿದ್ದು, ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್ ಎಂದು ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಸ್ಟೀವ್ ವಾ ಹೇಳಿದ್ದಾರೆ.
ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತ ಬೆನ್ನಲ್ಲೇ ಮತ್ತೆ ಧೋನಿ ನಿವೃತ್ತಿ ವಿಚಾರದ ಕುರಿತು ವ್ಯಾಪಕ ಚರ್ಚೆಗಳಾಗುತ್ತಿದ್ದು, ಧೋನಿ ಪರ-ವಿರೋಧ ಚರ್ಚೆಗಳು ವ್ಯಾಪಕವಾಗಿವೆ. ಈ ನಡುವೆ ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಲೆಜೆಂಡ್ ಆಟಗಾರ ಸ್ಟೀವ್ ವಾ ಅವರು ಧೋನಿ ಬೆನ್ನಿಗೆ ನಿಂತಿದ್ದು, 'ಧೋನಿ ಹೊರತು ಪಡಿಸಿ ಭಾರತೀಯ ಕ್ರಿಕೆಟ್ ಕುರಿತು ಮಾತನಾಡಲು ಸಾಧ್ಯವೇ ಇಲ್ಲ. ಮಹೇಂದ್ರ ಸಿಂಗ್ ಧೋನಿ ಸಾಮರ್ಥ್ಯವೇನು ಎಂಬುದು ನನಗೆ ತಿಳಿದಿದ್ದು, ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್ ಎಂದು ಶ್ಲಾಘಿಸಿದ್ದಾರೆ.
'ಏಕದಿನ ಪಂದ್ಯದಲ್ಲಿ ಚೇಸಿಂಗ್ ಮೂಲಕ ತಂಡ ಗೆಲ್ಲಿಸೋದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ನಲ್ಲಿ ಧೋನಿ, ತಂಡವನ್ನು ಗೆಲ್ಲಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಧೋನಿಯ ಹೊರತಾಗಿ ಭಾರತಕ್ಕೆ ಪಂದ್ಯವನ್ನು ಗೆಲ್ಲುವ ಅವಕಾಶವೇ ಇಲ್ಲ. ಧೋನಿಯನ್ನು ಟೀಕಿಸುತ್ತಿದ್ದಾರಲ್ಲ? ಆ ಟೀಕೆಗಳು ನಿಜಕ್ಕೂ ನ್ಯಾಯ ಸಮ್ಮತವಲ್ಲ. ನ್ಯೂಜಿಲೆಂಡ್ ವಿರುದ್ಧ ಆಡಿದ್ದ ಅದೇ ಶೈಲಿಯ ಆಟವಾಡಿ ಧೋನಿ ಅನೇಕ ಬಾರಿ ಭಾರತಕ್ಕೆ ಗೆಲುವು ತಂದಿದ್ದಾರೆ. ಈಗಲೂ ಅವರೇ ವಿಶ್ವದ ಅತ್ಯುತ್ತಮ ಫಿನಿಶರ್ ಎಂದು ಸ್ಟೀವ್ ವಾ ಹೇಳಿದ್ದಾರೆ.
SCROLL FOR NEXT