ಎಂಎಸ್ ಧೋನಿ-ಮತಿರಾ ಖಾನ್ 
ಕ್ರಿಕೆಟ್

ಪಾಕ್ ಆಟಗಾರರೇ ಮುಖ ತಿರುಗಿಸಿದರು, ಅಳುತ್ತಿದ್ದಾಗ ಧೋನಿ ನನ್ನನ್ನು ಕರೆದರು ಎಂದ ಪಾಕ್ ನಟಿ!

ಪಾಕಿಸ್ತಾನದ ಆಟಗಾರರೇ ನನ್ನ ಕಡೆ ಮುಖ ತಿರುಗಿಸಿ ಅಹಸ್ಯವಾಗಿ ಕಂಡರು ಆದರೆ ಅಲ್ಲೇ ಇದ್ದ ಎಂಎಸ್ ಧೋನಿ ಮಾತ್ರ ನನ್ನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡರು...

ಇಸ್ಲಾಮಾಬಾದ್: ಪಾಕಿಸ್ತಾನದ ಆಟಗಾರರೇ ಮುಖ ತಿರುಗಿಸಿ ನನ್ನನ್ನು ಅಹಸ್ಯವಾಗಿ ಕಂಡರು, ಆದರೆ ಅಲ್ಲೇ ಇದ್ದ ಎಂಎಸ್ ಧೋನಿ ಮಾತ್ರ ನನ್ನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡರು ಎಂದು ಪಾಕ್ ನಟಿಯೊಬ್ಬರು ಹಳೆಯ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
1998ರ ಏಷ್ಯಾಕಪ್ ವೇಳೆ ನಡೆದ ಘಟನೆಯೊಂದನ್ನು ಪಾಕ್ ನ ನಟಿ ಮತಿರಾ ಖಾನ್ ಹಂಚಿಕೊಂಡಿದ್ದಾರೆ. ಏಷ್ಯಾ ಕಪ್ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡ ತಂಗಿದ್ದ ಹೋಟೆಲಿನಲ್ಲೇ ಮತಿರಾ ಖಾನ್ ತಂಗಿದ್ದರು.
ನಾನು ಪಾಕಿಸ್ತಾನ ಕ್ರಿಕೆಟಿಗರ ಬಳಿ ಆಟೋಗ್ರಾಫ್ ಕೇಳಲು ಹೋಗಿದ್ದೆ. ಈ ವೇಳೆ ಕೆಲ ಆಟಗಾರರು ನನಗೆ ಆಟೋಗ್ರಾಫ್ ನೀಡಿದ್ದರು. ಆದರೆ ಇನ್ನು ಕೆಲ ಆಟಗಾರರು ಊಟ ಮಾಡುವುದಕ್ಕೂ ಬಿಡುವುದಿಲ್ಲ ಎಂದು ನನ್ನ ವಿರುದ್ಧ ರೇಗಿದ್ದರು. 
ಇದರಿಂದ ನಾನು ಅಳುತ್ತಾ ಹೋಗುತ್ತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ಧೋನಿ, ನಾನು ಭಾರತ ತಂಡದ ಆಟಗಾರ, ನನ್ನ ಬಳಿ ಆಟೋಗ್ರಾಫ್ ತೆಗೆದುಕೊಳ್ಳಲ್ವ ಎಂದು ಕೇಳಿದರು. ಅವರು ಆಟೋಗ್ರಾಫ್ ನೀಡಿದ್ದಲ್ಲದೆ ನನ್ನನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ಮಾತನಾಡಿದ್ದರು ಎಂದು ಮತಿರಾ ಹೇಳಿಕೊಂಡಿದ್ದಾರೆ.
ಆದರೆ ಕೆಲ ಮೂಲಗಳ ಪ್ರಕಾರ ಎಂಎಸ್ ಧೋನಿ 2004ರಲ್ಲಿ ಕ್ರಿಕೆಟ್ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದರು. ಈಗಿರುವಾಗ 1998ರಲ್ಲಿ ಧೋನಿ ಏಷ್ಯಾ ಕಪ್ ಆಡಿದ್ದರಾ ಎಂಬ ಪ್ರಶ್ನೆ ಮೂಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು