ಕ್ರಿಕೆಟ್

ಶ್ರೀಲಂಕಾ ವೇಗಿ ಕುಲಶೇಖರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

Raghavendra Adiga
ಕೊಲಂಬೊ: ಶ್ರೀಲಂಕಾ ತಂಡದ ಅನುಭವಿ ವೇಗದ ಬೌಲರ್ ನುವಾನ್ ಕುಲಶೇಖರ ಅವರು ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
37 ವರ್ಷದ ಕುಲಶೇಖರ್ ಅವರು ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವಲ್ಲಿ ನಿಸ್ಸೀಮರು. ಇವರು ಶ್ರೀಲಂಕಾ ಪರ ಗರಿಷ್ಠ ವಿಕೆಟ್ ಪಡೆದ ವೇಗಿಯಾಗಿದ್ದಾರೆ. 
ಅವರು 199 ಪಂದ್ಯಗಳಲ್ಲಿ 184 ವಿಕೆಟ್ ಕಬಳಿಸಿದ್ದಾರೆ. ವಿಕೆಟ್ ಪಡೆಯುವ ಲೆಕ್ಕಾಚಾರದಲ್ಲಿ ಇವರಿಗಿಂತಲೂ ಮುಂಚೂಣಿಯಲ್ಲಿ ಚಮಿಂಡಾ ವಾಸ್ ಹಾಗೂ ಲಸೀತ್ ಮಲಿಂಗ ಇದ್ದಾರೆ. ಮಲಿಂಗ ಅವರು ಬಾಂಗ್ಲಾದೇಶ ಸರಣಿಯ ಮೊದಲ ಪಂದ್ಯದ ಬಳಿಕ ನಿವೃತ್ತಿ ಹೇಳುವುದಾಗಿ ತಿಳಿಸಿದ್ದಾರೆ. 
ಟಿ20 ಗಳಲ್ಲಿ, ಕುಲಶೇಖರ ಶ್ರೀಲಂಕಾ ತಂಡದಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದಾರೆ. , 58 ಪಂದ್ಯಗಳಲ್ಲಿ 66 ಸ್ಕಲ್ಪ್ ಗಳಿಸಿದ್ದ ಇವರು ಟೆಸ್ಟ್ ಪಂದ್ಯಗಳಲ್ಲಿ ಕುಲಶೇಖರ 21 ಪಂದ್ಯಗಳಲ್ಲಿ 48 ವಿಕೆಟ್ ಪಡೆದಿದ್ದಾರೆ.
ಕುಲಶೇಖರ ಕೊನೆಯ ಬಾರಿಗೆ 2017ರಲ್ಲಿ ಶ್ರೀಲಂಕಾ ಪರ ಏಕದಿನ ಪಂದ್ಯ ಆಡಿದ್ದರು. 2003 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದ ಮೂಲಕ ಅವರು ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.
2011ರ ವಿಶ್ವಕಪ್ ಫೈನಲ್ಸ್ ನಲ್ಲಿ ಭಾರತ ವಿಶ್ವಕಪ್ ಗೆಲ್ಲುವ ಅಂತಿಮ ಕ್ಷಣದಲ್ಲಿ ಕುಲಶೇಖರ ಎಸೆದ ಬಾಲ್ ಗೆ ಎಂ.ಎಸ್.ಧೋನಿ ಸಿಕ್ಸರ್ ಬಾರಿಸಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಇಂದಿಗೂ ಮರೆಯಲಾಗದ ನೆನಪಾಗಿ ಉಳಿದಿದೆ.
SCROLL FOR NEXT