ಸಚಿನ್-ಧರ್ಮಸೇನಾ 
ಕ್ರಿಕೆಟ್

ವಿಚಿತ್ರ ಸಂದರ್ಭ: ಔಟ್ ಅಥವಾ ನಾಟೌಟ್? ಸಚಿನ್ ವಿಡಿಯೋ ಶೇರ್, ಅಂಪೈರ್ ಧರ್ಮಸೇನಾ ಟ್ರೋಲ್!

ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ಈ ವಿಡಿಯೋ ಕೆಳಗೆ ಇದು ಔಟ್ ಅಥವಾ ನಾಟೌಟ್ ಎಂಬುದನ್ನು ನಿರ್ಧರಿಸಿ ಎಂದು ಅಭಿಮಾನಿಗಳಿಗೆ ಕರೆ...

ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ಈ ವಿಡಿಯೋ ಕೆಳಗೆ ಇದು ಔಟ್ ಅಥವಾ ನಾಟೌಟ್ ಎಂಬುದನ್ನು ನಿರ್ಧರಿಸಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. 
ಕೌಂಟಿ ಕ್ರಿಕೆಟ್ ನಲ್ಲಿ ನಡೆದಿದ್ದ ಘಟನೆಯ ವಿಡಿಯೋವನ್ನು ಸಚಿನ್ ಶೇರ್ ಮಾಡಿದ್ದಾರೆ. ಹೌದು ಬೌಲರ್ ಎಸೆದ ಚೆಂಡು ವಿಕೆಟ್ ಗೆ ತಗುಲಿತು. ಈ ವೇಳೆ ಬೇಲ್ಸ್ ಕೆಳಗೆ ಬೀಳದೆ ವಿಕೆಟ್ ಮೇಲೆ ಮಧ್ಯಕ್ಕೆ ಬಂದು ನಿಂತುಕೊಂಡಿತು. ಇದರಿಂದ ಮೈದಾನದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಕ್ರಿಕೆಟ್ ಲೋಕವನ್ನು ಗಾಢವಾಗಿ ಚಿಂತಿಸುವಂತೆ ಮಾಡಿದೆ.
ಸಚಿನ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳೆ ಅವರು ಬೇಲ್ಸ್ ತನ್ನ ಸ್ಥಾನದಿಂದ ಬೇರ್ಪಟ್ಟರೇ ಅದು ಔಟ್ ಎಂದು ತೀರ್ಪು ನೀಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಂಪೈರ್ ಧರ್ಮಸೇನಾ ನೀಡಿದ 6 ರನ್ ತೀರ್ಪು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದನ್ನೇ ಮುಂದಿಟ್ಟು ಕೆಲವರು ಧರ್ಮಸೇನಾರನ್ನು ಎಳೆತಂದು ಟ್ರೋಲ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

SCROLL FOR NEXT