ವಿರಾಟ್ ಕೊಹ್ಲಿ, ಕಗಿಸೋ ರಬಾಡಾ
ಲಂಡನ್: ಟೀಂ ಇಂಡಿಯಾದ ನಾಯಕ ಅಪ್ರಬುದ್ಧ. ತಮ್ಮ ವಿರುದ್ಧದ ನಿಂದನೆಗಳು ಎದುರಿಸಲಾಗದೆ ಮೈದಾನದಲ್ಲಿ ಅಗ್ರೇಷನ್ ಆಗಿ ವರ್ತಿಸುತ್ತಾರೆ ಎಂದು ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡಾ ಹೇಳಿದ್ದು ಇದು ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮೈದಾನದಲ್ಲಿ ಆಕ್ರೋಶ ಭರಿತವಾಗಿ ಆಡುವ ಕೊಹ್ಲಿ ಎದುರಾಳಿಯನ್ನು ನಿಂದಿಸುವುಕ್ಕೂ ಹಿಂಜರಿಯುವುದಿಲ್ಲ. ಅದೇ ರೀತಿ ಕೊಹ್ಲಿಯನ್ನು ಎದುರಾಳಿ ನಿಂದಿಸಿದರೆ ಅದನ್ನು ಕೊಹ್ಲಿ ಸಹಿಸಿಕೊಳ್ಳುವುದಿಲ್ಲ. ಈ ವೇಳೆ ಅಪ್ರಬುದ್ಧತೆಯಿಂದ ವರ್ತಿಸುತ್ತಾರೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅಗ್ರೇಷನ್ ಮೂಲಕ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಾರೆ. ಆದರೆ ಅದೇ ಬಾಣ ಕೊಹ್ಲಿ ಮೇಲೆ ತಿರುಗಿ ಬಿದ್ದರೆ ಇಷ್ಟಪಡುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್ ಪಂದ್ಯವೊಂದರಲ್ಲಿ ತಮಗೆ ಆದ ಅನುಭವವನ್ನು ಉದಾಹರಣೆಯಾಗಿ ನೀಡಿದ್ದಾರೆ.
ಆರ್ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿ ಪಂದ್ಯವೊಂದರಲ್ಲಿ ಮೊದಲು ಬೌಂಡರಿ ಬಾರಿಸಿದರು. ಈ ವೇಳೆ ನನ್ನನ್ನು ನಿಂದಿಸಿದರು. ಬಳಿಕ ನಾನು ಅದನ್ನೇ ಮಾಡಿದಾಗ ತುಂಬಾನೇ ಕೋಪಗೊಂಡರು. ಕೊಹ್ಲಿ ಅದ್ಭುತ ಆಟಗಾರ. ಆದರೆ ನಿಂದನೆಯನ್ನು ಸ್ವೀಕರಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಜೂನ್ 5ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದ್ದು ಅದಾಗಲೇ ಆಫ್ರಿಕಾದ ವೇಗಿ ಕಗಿಸೋ ರಬಾಡಾ ಸ್ಲೆಡ್ಜಿಂಗ್ ಗೆ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics