ಲಂಡನ್: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಗೆಲುವಿನ ಪಾದಾರ್ಪಣೆ ಮಾಡಿದ್ದು ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಕ್ರಿಸ್ ಮಧ್ಯೆ ನಿಂತು ಸಿಂಗಲ್ ರನ್‌ಗಾಗಿ ಸರ್ಕಸ್ ಮಾಡಿದ್ದು ಸ್ವಲ್ಪ ಎಡವಿದ್ರೂ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು.
ದಕ್ಷಿಣ ಆಫ್ರಿಕಾ ನೀಡಿದ 228 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ. ಇಬ್ಬರು ಒಳ್ಳೆಯ ಜೊತೆಯಾಟ ನೀಡುತ್ತಿದ್ದು 139 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಬಲಭಾಗಕ್ಕೆ ಚೆಂಡನ್ನು ಬಾರಿಸಿದರು. ಈ ವೇಳೆ ರೋಹಿತ್ ಶರ್ಮಾ ಸಿಂಗಲ್ ರನ್ ತೆಗೆದುಕೊಳ್ಳಲು ಮುಂದಾದರೂ. ಎಂಎಸ್ ಧೋನಿ ಅರ್ಧ ಕ್ರಿಸ್ ಗೆ ಬಂದಾಗ ರೋಹಿತ್ ಶರ್ಮಾ ರನ್ ಬೇಡ ಎಂಬಂತೆ ಸೂಚನೆ ನೀಡಿದರು. ಆದರೆ ಅಲ್ಲಿದ್ದ ಫೀಲ್ಡರ್ ಚೆಂಡನ್ನು ಮಿಸ್ ಮಾಡಿದ್ದರಿಂದ ಆರಾಮವಾಗಿ ಸಿಂಗಲ್ ರನ್ ತೆಗೆದುಕೊಂಡರು. ಒಂದು ವೇಳೆ ಫೀಲ್ಡರ್ ಚೆಂಡನ್ನು ಹಿಡಿದಿದ್ದರೇ ವಿಕೆಟ್ ಖಂಡಿತವಾಗಿಯು ಬೀಳುತ್ತಿತ್ತು.
ಸಿಂಗಲ್ ರನ್ ಪಡೆದ ನಂತರ ರೋಹಿತ್ ಶರ್ಮಾ ನಗುತ್ತಲೆ ಎಂಎಸ್ ಧೋನಿಯನ್ನು ಸಾರಿ ಕೇಳಿದರು. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics