ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವೇಗಿ ಆರ್ಚರ್ ಎಸೆದ ಚೆಂಡು ಬ್ಯಾಟ್ ಗೆ ತಗುಲದೆ ಸಿಕ್ಸರೆ ಗೆರೆಗೆ ಬಿದ್ದಿದೆ. ಇನ್ನು ಸಿಕ್ಸರ್ ಅಂದುಕೊಂಡವರಿಗೆ ಶಾಕ್ ಎದುರಾಗಿತ್ತು.
ಲಂಡನ್ ನ ಕಾರ್ಡಿಫ್ ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಆರ್ಚರ್ ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಸೌಮ್ಯ ಸರ್ಕಾರ್ ರನ್ನು ಬೌಲ್ಡ್ ಮಾಡಿದರು. ವಿಚಿತ್ರ ಎಂದರೆ ವಿಕೆಟ್ ಗೆ ಬಡಿದ ಚೆಂಡು ನೇರವಾಗಿ ಸಿಕ್ಸರ್ ಗೆರೆಗೆ ಬಿದ್ದಿತ್ತು.
ಚೆಂಡು ಬ್ಯಾಟ್ ಗೆ ತಗುಲಿ ಸಿಕ್ಸರ್ ಹೋಗಿದೆ ಎಂದು ಪ್ರೇಕ್ಷಕರು ಅಂದುಕೊಂಡರು. ಆದರೆ ಕ್ಯಾಮೆರಾ ವಿಕೆಟ್ ಅನ್ನು ಸೆರೆಹಿಡಿದಾಗ ಅಲ್ಲಿ ಬೆಲ್ಸ್ ಕೆಲಗೆ ಬಿದ್ದಿರುವುದು ಕಂಡು ಬಂದಿತು.
ಒಟ್ಟಿನಲ್ಲಿ ರೋಚಕದ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡ 386 ರನ್ ಪೇರಿಸಿದ್ದು ಬಾಂಗ್ಲಾದೇಶ 280 ರನ್ ಗಳಿಗೆ ಆಲೌಟ್ ಆಗಿ 106 ರನ್ ಗಳಿಂದ ಸೋಲು ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics