ಕ್ರಿಕೆಟ್

ವಿಶ್ವಕಪ್ 2019: ಸಿಂಹಿಳೀಯರನ್ನು ಮಣಿಸಿದ ಅಸೀಸ್ ಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ

Raghavendra Adiga
ಲಂಡನ್: ದಿ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಸಿ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 87 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಡನೆ ಸರಣಿಯಲ್ಲಿ ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದಿರುವ ಅಸೀಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಅಸೀಸ್ ನೀಡಿದ್ದ 335 ಬೃಹತ್ ಗುರಿ ಬೆನ್ನತ್ತಿದ ಲಂಕಾ ಪಡೆ ನಾಯಕ ದಿಮುತ್ ಕರುಣಾರತ್ನೆ (97) ಹಾಗೂ ಕುಸಾಲ್ ಪರೇರಾ (52) ಶತ ಪ್ರಯತ್ನದ ಹೊರತಾಗಿಯೂ 45.5 ಓವರ್ ಗಳಲ್ಲಿ 247 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿತು.

ಲಂಕಾ ಪರ ಕುಸಾಲ್ ಪರೇರ್33 ಎಸೆತಗಳಲ್ಲೇ ಅರ್ಧಶತಕ ಸಿಡಿಸುವ ಮೂಲಕ ಪ್ರಸಕ್ತ ವಿಶ್ವಕಪ್ ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಇನ್ನೊಬ್ಬ ಆಟಗಾರನೆನಿಸಿಕೊಂಡರು. ನಾಯಕ ದಿಮುತ್ 43 ಎಸೆತಗಳಲ್ಲಿ ಅರ್ಧಶತಕ  108 ಎಸೆತಗಳ್ಲಿ ಒಂಬತ್ತು ಬೌಂಡರಿಸೇರಿ 97 ರನ್ ಗಳಿಸಿದ್ದರು.

ಆದರೆ ಲಂಕಾ ಇತರೆ ಆಟಗಾರರಾರೂ ಈ ಇಬ್ಬರಿಗೆ ಹೆಚ್ಚು ಸಾಥ್ ನೀಡಲಿಲ್ಲ. ಹಾಗಾಗಿ ಲಂಕಾ ಸೋಲು ಖಚಿತವಾಯುತು.

ಆಸ್ಟ್ರೇಲಿಯಾ ಪರವಾಗಿ ಮಿಚೆಲ್ ಸ್ಟಾರ್ಕ್ ನಾಲ್ಕು ಹಾಗೂ ಕೇನ್ ರಿಚರ್ಡ್ಸಸನ್ ಮೂರು ವಿಕೆಟ್ ಕಬಳಿಸಿದರು.

ಈ ಸೋಲಿನೊಡನೆ ಲಂಕಾ ಸರಣಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನಷ್ಟೇ ಪಡೆದು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಮುಂದುವರಿದಿದೆ.
SCROLL FOR NEXT