ಕ್ರಿಕೆಟ್

ವಿಶ್ವಕಪ್ : ಪ್ರಧಾನಿ ಇಮ್ರಾನ್ ಖಾನ್ ಸಲಹೆ ನಿರ್ಲಕ್ಷಿಸಿದ ಪಾಕ್ ತಂಡ!

Nagaraja AB
ಮ್ಯಾಂಚೆಸ್ಟರ್ : ನಿನ್ನೆ ನಡೆದ ಭಾರತ- ಪಾಕಿಸ್ತಾನ ನಡುವಣ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಹುರಿದುಂಬಿಸಲು  ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಟ್ವೀಟರ್ ಮೂಲಕ ಸಲಹೆ ನೀಡುತ್ತಿದ್ದರು.
 ಟಾಸ್ ಗೆದ್ದರೆ ಮೊದಲು ಬ್ಯಾಟಿಂಗನ್ನೆ ಆಯ್ದುಕೊಳ್ಳಿ ಎಂದು ಇಮ್ರಾನ್ ಖಾನ್ ಸಲಹೆ  ಮಾಡಿದ್ದರು. ಆದರೆ. ಸರ್ಫರಾಜ್ ಈ ಸಲಹೆಗೆ ಬೆಲೆ ನೀಡಿಲ್ಲ. 
1992ರಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನ ತಂಡದ ನಾಯಕರಾಗಿದ್ದ ಸಂದರ್ಭದಲ್ಲಿ ಯಾರೊಬ್ಬರು ಅವರ ನಿರ್ಧಾರವನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ,  ಒಲ್ಡ್ ಟ್ರಾಪೊರ್ಡ್ ನಲ್ಲಿ ನಡೆದ ಪಂದ್ಯದಲ್ಲಿ  ಇಮ್ರಾನ್ ಖಾನ್ ಸಲಹೆಯನ್ನು ಪಾಕಿಸ್ತಾನ ತಂಡ ಏಕೆ ಸ್ವೀಕರಿಸಲಿಲ್ಲ ಎಂದು  ಟ್ವೀಟಿಗರು ಅಪಹಾಸ್ಯ ಮಾಡುತ್ತಿದ್ದಾರೆ. 
 ಪಾಕಿಸ್ತಾನದ ಏಕೈಕ ವಿಶ್ವಕಪ್ ಗೆಲುವಿನ ರೂವಾರಿಯಾಗಿರುವ ಇಮ್ರಾನ್ ಖಾನ್ ಅವರನ್ನು ಜನರು ಈಗಲೂ ಪ್ರೀತಿಯಿಂದ ಕಪ್ತಾನ ಎಂದೇ ಕರೆಯುತ್ತಾರೆ.
SCROLL FOR NEXT