ವಿಶ್ವಕಪ್: ಮಾರ್ಗನ್ ದಾಖಲೆಯ ಶತಕ, ಅಫ್ಘಾನ್ ವಿರುದ್ಧ ಆಂಗ್ಲರಿಗೆ 150 ರನ್ ಅಮೋಘ ಜಯ
ಮ್ಯಾಂಚೆಸ್ಟರ್: ಈ ಸಾಲಿನ ಐಸಿಸಿ ವಿಶ್ವಕಪ್ ಸರಣಿಯ ಮಂಗಳವಾರದ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ಅಫ್ಘಾನಿಸ್ಥಾನದ ವಿರುದ್ಧ 150 ರನ್ ಗಳ ಅಮೋಘ ಜಯ ಸಾಧಿಸಿದೆ.
ನಾಯಕ ಇಯಾನ್ ಮಾರ್ಗನ್ ಏಕದಿನ ಕ್ರಿಕೆಟ್ ನ ಒಂದೇ ಇನ್ನಿಂಗ್ಸ್ ನಲ್ಲಿ 17 ಸಿಕ್ಸರ್ ಸಿಡಿಸಿ, ಹೊಸ ವಿಶ್ವದಾಖಲೆ ನಿರ್ಮಿಸಿದ್ದು ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 397/6 ರನ್ ಕಲೆ ಹಾಕಿತ್ತು.
ಈ ಬೃಹತ್ ಮೊತ್ತ ಬೆನ್ನತ್ತಿದ್ದ ದುರ್ಬಲ ಅಫ್ಘಾನ್ ಪಡೆಯ ಪ್ರಾರಂಭ ಅಷ್ಟೇನೂ ಉತ್ತಮವಾಇರಲಿಲ್ಲ. ನೂರ್ ಅಲಿ ಝದ್ರಾನ್ ಶೂನ್ಯಕ್ಕೆ ಔಟಾದರೆ ನಾಯಕ ಗುಲ್ಬದಿನ್ ನೈಬ್ 37, ರಹಮತ್ ಶಾ 46 ರನ್ ಗಳಿಸಿದ್ದರು.
ಹಶ್ಮಮತುಲ್ಲಾ ಶಾಹಿದಿ ಅರ್ಧಶತಕ ಸಿಡಿಸಿ ಗಮನ ಸೆಳೆದರೂ ಸಹ ಅವರೊಡನೆ ಜತೆಯಾದ ಯಾರೊಬ್ಬರೂ ಅವರಿಗೆ ಸಾಥ್ ನೀಡಲು ವಿಫಲವಾಗಿದ್ದದ್ದು ತಂಡದ ಹಿನ್ನೆಡೆಗೆ ಕಾರಣವಾಗಿತ್ತು. ಇನ್ನು ಅಸ್ಗರ್ ಅಫ್ಘಾನ್ 44 ರನ್ ಕಲೆ ಹಾಕಿ ಔಟಾಗುವ ಮೂಲಕ ಕೇವಲ ಆರು ರನ್ ಗಳಿಂದ ಅರ್ಧಶತಕದಿಂದ ವಂಚಿತರಾದರು. ಇನ್ನು ಮೊಹಮ್ಮದ್ ನಬಿ (9), ನಜಿಬುಲ್ಲಾ ಝದ್ರಾನ್ (15), ರಶೀದ್ ಖಾನ್ (8), ಇಕ್ರಂ ಅಲಿ ಖಿಲ್ (3*) ರನ್ಕಲೆಹಾಕಿದ್ದರು. ಅಂತಿಮವಾಗಿ ಅಫ್ಘಾನಿಸ್ಥಾನ ಎಂಟು ವಿಕೆಟ್ ನಷ್ಟಕ್ಕೆ ೨೪೭ ರನ್ ಗಳಿಸಲಷ್ಟೇ ಯಶಸ್ವಿಯಾಗಿದೆ.
ಇಂಗ್ಲೆಂಡ್ ಪರವಾಗಿ ಜೋಫ್ರಾ ಆರ್ಚರ್ ಹಾಗೂ ಆದಿಲ್ ರಶೀದ್ತಲಾ ಮೂರು, ಮಾರ್ಕ್ ವುಡ್ ಎರಡು ವಿಕೆಟ್ ಕಬಳಿಸಿ ಗಮನ ಸೆಳೆದರು.
ಈ ಗೆಲುವಿನೊಡನೆ ಅತಿಥೇಯ ಇಂಗ್ಲೆಂಡ್ ತಾನಾಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿ ಎಂಟು ಅಂಕಗಳೊಡನೆ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos