ಕ್ರಿಕೆಟ್

17 ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬರೆದ ಮಾರ್ಗನ್, ಅಫ್ಘಾನ್ ಗೆಲುವಿಗೆ 398 ರನ್‌ಗಳ ಬೃಹತ್ ಟಾರ್ಗೆಟ್

Lingaraj Badiger
ಮ್ಯಾಂಚೆಸ್ಟರ್: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಏಕದಿನ ಕ್ರಿಕೆಟ್ ನ ಒಂದೇ ಇನ್ನಿಂಗ್ಸ್ ನಲ್ಲಿ 17 ಸಿಕ್ಸರ್ ಸಿಡಿಸಿ, ಹೊಸ ವಿಶ್ವದಾಖಲೆ ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ 200ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.
ಮಾರ್ಗನ್ ಅವರು ಮಂಗಳವಾರ ವಿಶ್ವಕಪ್ ಪಂದ್ಯದಲ್ಲಿ ಆಫ್ಘಾನ್ ವಿರುದ್ಧ 71 ಎಸೆತಗಳಲ್ಲಿ 4 ಬೌಂಡರಿ, 17 ಸಿಕ್ಸರ್ ಸಹಾಯದಿಂದ 148 ರನ್ ಗಳಿಸಿದರು. ಈ ಮೂಲಕ ಭಾರತದ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ ಅವರು ಸಿಡಿಸಿದ 16 ಸಿಕ್ಸರ್ ದಾಖಲೆಯನ್ನು ಅಳಿಸಿ ಹಾಕಿದರು. ಅಲ್ಲದೆ ಏಕದಿನದಲ್ಲೇ ನಾಲ್ಕನೇ ಅತಿ ವೇಗದ ಶತಕ ಸಿಡಿಸಿದ(57 ಎಸೆತ) ಗೌರವಕ್ಕೆ ಇಯಾನ್ ಮಾರ್ಗನ್ ಪಾತ್ರವಾಗಿದ್ದಾರೆ.
ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ದುರ್ಬಲ ಅಫಘಾನಿಸ್ತಾನ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ನಾಯಕ ಇಯಾನ್ ಮಾರ್ಗನ್ ಸಿಡಿಲಬ್ಬರದ ಶತಕ (148) ಮತ್ತು ಜಾನಿ ಬೈರ್‌ಸ್ಟೋವ್ (90) ಹಾಗೂ ಜೋ ರೂಟ್ (88) ಆಕರ್ಷಕ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 397 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
SCROLL FOR NEXT