ಕ್ರಿಕೆಟ್

ವಿಶ್ವಕಪ್ ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕ್ ಇದೇ ಮೊದಲ ಬಾರಿ ಸೋತಿಲ್ಲ- ಸರ್ಫರಾಜ್

Nagaraja AB
ಮ್ಯಾಂಚೆಸ್ಟರ್ :ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ
ಇದೇ ಮೊದಲ ಬಾರಿ  ಸೋತಿಲ್ಲ  ಎಂದು ಪಾಕ್ ತಂಡದ ನಾಯಕ ಸರ್ಫರಾಜ್  ಸಮರ್ಥಿಸಿಕೊಂಡಿದ್ದಾರೆ.
ನಾಳೆ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮತ್ತೆ ಕಮ್ ಬ್ಯಾಕ್ ಆಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ವಿರುದ್ಧ ಸೋಲಿನ ಕುರಿತಂತೆ  ಪ್ರತಿಕ್ರಿಯಿಸಿರುವ ಸರ್ಫರಾಜ್, ಈ ಹಿಂದೆ ಹಲವು ಬಾರಿ ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಸೋತಿದೆ. ಭಾರತ ವಿರುದ್ಧದ ಪಂದ್ಯದ ನಂತರ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ವಿಶ್ವಕಪ್ ನಲ್ಲಿ ಪಾಕಿಸ್ತಾನ ಏಳು ಬಾರಿ ಸೋಲನ್ನುಭವಿಸಿದೆ. 
ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಸೋತಾಗ ಪಾಕಿಸ್ತಾನದ ನಾಯಕನಾಗಿ ಮಾನಸಿಕವಾಗಿ ತುಂಬಾ ಒತ್ತಡಕ್ಕೊಳಗಾಗಬೇಕಾಗುತ್ತದೆ. ಜನರು ನಾವು ಸೋತಿದ್ದೇವೆ  ಎಂದು ಅಪಹಾಸ್ಯ ಮಾಡುತ್ತಾರೆ. ಆದರೆ, ಇದೇನೂ ಮೊದಲ ಬಾರಿಗೆ ಸೋತಿಲ್ಲ. ಮತ್ತೆ ಕಮ್ ಬ್ಯಾಕ್ ಆಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 
ಈಗಲೂ ಕೂಡಾ ನಮ್ಮಲ್ಲಿ ಆತ್ಮಸ್ಱೈರ್ಯ ಹೆಚ್ಚಿದೆ.  ಪಂದ್ಯದಿಂದ ಪಂದ್ಯಕ್ಕೆ ವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ನಾಳಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಅತೀವ ವಿಶ್ವಾಸ ಇರುವುದಾಗಿ ಸರ್ಫರಾಜ್ ಹೇಳಿದ್ದಾರೆ.
SCROLL FOR NEXT