ಮ್ಯಾಂಚೆಸ್ಟರ್ : ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ಸ್ಪೀನರ್ ಹೆಟ್ಮಿಯರ್ ಅವರ ಹ್ಯಾಟ್ ನ್ನು ತನ್ನ ಬ್ಯಾಟ್ ನಿಂದ ಮೇಲಕ್ಕೆತ್ತಿ ಗಮನ ಸೆಳೆದರು.
ವೆಸ್ಟ್ ಇಂಡೀಸ್ ಸ್ಪೀನರ್ ಹೆಟ್ಮಿಯರ್ ಪಂದ್ಯದ ಸಂದರ್ಭದಲ್ಲಿ ಮೆರೂನ್ ಬಣ್ಣದ ಹ್ಯಾಟ್ ಧರಿಸುವುದು ಸಾಮಾನ್ಯ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಹೆಟ್ಮಿಯರ್ ಕ್ಯಾಪ್ ಮೈದಾನದ ಕೆಳಗೆ ಹಾಕಿದ್ದರು. ಇದನ್ನು ನೋಡಿದ ಕೊಹ್ಲಿ ತನ್ನ ಬ್ಯಾಟ್ ನಿಂದ ಮೇಲಕ್ಕೆತ್ತಿ ಅದನ್ನು ಹೆಟ್ಮಿಯರ್ ಕೈಗೆ ನೀಡಿದ್ದಾರೆ.
ಉಭಯ ಬಣಗಳ ನಡುವಣ ಕಾದಾಟದ ಸಂದರ್ಭದಲ್ಲಿ ಕೆಲ ತಂಡಗಳು ಉದ್ದೇಶಪೂರ್ವಕವಾಗಿಯೇ ವಿಭಿನ್ನ ಹಾವಭಾವದ ಮೂಲಕ ವಿರೋಧಿ ಬಣವನ್ನು ಪ್ರಚೋದಿಸುವುದು, ಕಾಲೆಳೆಯುವುದು, ವ್ಯಂಗ್ಯ ಮಾಡುವುದು ಇರುತ್ತದೆ.
ಆದರೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಭರ್ಜರಿ ಆಟದ ಮೂಲಕ ತಂಡದ
ಮೊತ್ತವನ್ನು ಹೆಚ್ಚಿಸಿದ ಜೊತೆಗೆ ವೀಂಡಿಸ್ ಆಟಗಾರನ ಹ್ಯಾಟ್ ನ್ನು ತನ್ನ ಬ್ಯಾಟಿನಿಂದ ಮೇಲಕ್ಕೆತ್ತಿ ಅದನ್ನು ಹೆಟ್ಮಿಯರ್ ಗೆ ನೀಡುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics