ಲಂಡನ್: ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಬೆನ್ ಸ್ಟೋಕ್ಸ್ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದು ಮಿಚೆಲ್ ಸ್ಟಾರ್ಕ್ ವರ್ಷದ ಅತ್ಯುತ್ತಮ ರ್ಯಾರ್ಕರ್‌ನಲ್ಲಿ ಬೌಲ್ಡ್ ಆಗಿದ್ದರು. ಆದರೆ ಆವೇಶದಲ್ಲಿ ಕಾಲಿನಿಂದ ಒದ್ದು ಹೋಗಿರುವ ಅವರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇಂಗ್ಲೆಂಡ್ ಪರ ಬ್ಯಾಟ್ ಬೀಸಿದ್ದ ಬೆನ್ ಸ್ಟೋಕ್ಸ್ 103 ಎಸೆತದಲ್ಲಿ 89 ರನ್ ಬಾರಿಸಿ ಶತಕದ ಹೊಸ್ತಿಲಲ್ಲಿದ್ದರು. ಆದರೆ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ರ್ಯಾರ್ಕರ್ ಆಗಿದ್ದು ಸ್ಟೋಕ್ಸ್ ಬ್ಯಾಟ್ ಎತ್ತಿಕೊಳ್ಳುವಷ್ಟರಲ್ಲೇ ಬೌಲ್ಡ್ ಆಗಿತ್ತು.
ಇದರಿಂದ ಬೇಸರಗೊಂಡ ಸ್ಟೋಕ್ಸ್ ಬ್ಯಾಟ್ ಅನ್ನು ಕಾಲಿನಿಂದ ಒದ್ದು ನಂತರ ಎತ್ತಿಕೊಂಡು ಹೋಗಿರುವುದು ಟ್ವೀಟರಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಟೋಕ್ಸ್ ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 64 ರನ್ ಗಳಿಂದ ಗೆಲುವು ಸಾಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics