ಐಸಿಸಿ ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 338 ರನ್ ಗಳ ಗುರಿ
ಬರ್ಮಿಂಗ್ ಹ್ಯಾಮ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎದುರಿಸುತ್ತಿರುವ ಇಂಗ್ಲೆಂಡ್ ಎದುರಾಳಿ ಭಾರತಕ್ಕೆ 338 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಆರಂಭದಿಂದಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆದರೆ ಕ್ರಮೇಣ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಗಳ ಓಟಕ್ಕೆ ಬ್ರೇಕ್ ಹಾಕುವಲ್ಲಿ ಭಾರತದ ಬೌಲರ್ ಗಳು ಯಶಸ್ವಿಯಾದರು. ನಿಗದಿತ 50 ಓವರ್ ಗಳಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 337 ರನ್ ದಾಖಲಿಸಿತು.
ಬೈರ್‌ಸ್ಟೋ ಅಬ್ಬರದ ಶತಕ (109 ಎಸೆತಗಳಲ್ಲಿ 111 ರನ್) , ಜಾನ್ಸನ್ ರಾಯ್ ( 57 ಎಸೆತಗಳಲ್ಲಿ 66 ರನ್) ಬೆನ್ ಸ್ಟೋಕ್ಸ್ (54 ಎಸೆತಗಳಲ್ಲಿ 79 ರನ್) ಇಂಗ್ಲೆಂಡ್ ತಂಡಕ್ಕೆ ನೆರವಾಯಿತು.
ಮೊಹಮ್ಮದ್ ಶಮಿ 66 ರನ್ ನೀಡಿ 5 ವಿಕೆಟ್ ಪಡೆದರೆ ಜಸ್ಪ್ರೀತ್ ಬೂಮ್ರಾ 44 ರನ್ ನೀಡಿ 1 ವಿಕೆಟ್ ಗಳಿಸಿದರು. ಕುಲ್ದೀಪ್ ಯಾದವ್ 72 ರನ್ ನೀಡಿ 1 ವಿಕೆಟ್ ಗಳಿಸಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸುವಲ್ಲಿ ತಂಡಕ್ಕೆ ನೆರವಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics