ಸಂಗ್ರಹ ಚಿತ್ರ 
ಕ್ರಿಕೆಟ್

ಬ್ರಿಯಾನ್ ಲಾರಾ, ಸಚಿನ್ ಗಿಂತ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ?: ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದೇನು?

ಆಧುನಿಕ ಕ್ರಿಕೆಟ್ ನ ದ್ರುವತಾರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಮತ್ತು ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗಿಂತಲೂ ಶ್ರೇಷ್ಠ ಆಟಗಾರರೇ ಎಂಬ ಹೊಸದೊಂದು ವಾದ ಹುಟ್ಟಿಕೊಂಡಿದೆ.

ಲಂಡನ್: ಆಧುನಿಕ ಕ್ರಿಕೆಟ್ ನ ದ್ರುವತಾರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಮತ್ತು ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗಿಂತಲೂ ಶ್ರೇಷ್ಠ ಆಟಗಾರರೇ ಎಂಬ ಹೊಸದೊಂದು ವಾದ ಹುಟ್ಟಿಕೊಂಡಿದೆ.
ಹೌದು.. ಇಂತಹ ವಾದಕ್ಕೆ ಕಾರಣವಾಗಿದ್ದು, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅವರ ಟ್ವೀಟ್.. ನಿನ್ನೆ ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ತಮ್ಮ ಏಕದಿನ ವೃತ್ತಿ ಜೀವನದ 41ನೇ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ಪಂದ್ಯವನ್ನು ಭಾರತ 32 ರನ್ ಗಳ ಅಂತರದಲ್ಲಿ ಕಳೆದುಕೊಂಡಿತಾದರೂ, ಕೊಹ್ಲಿ ಬ್ಯಾಟಿಂಗ್ ವೈಖರಿ ಮಾತ್ರ ಎಲ್ಲರ ಗಮನ ಸೆಳೆಯಿತು.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಮೈಕಲ್ ವಾನ್, ದ ಗೋಟ್ ಈಸ್ ಅಟ್ ಅಗೈನ್ #ವಿರಾಟ್ (The Goat is at Again..) ಎಂದು ಟ್ವೀಟ್ ಮಾಡಿದ್ದಾರೆ. ವಾನ್ ಅವರ ಈ ಟ್ವೀಟ್ ಗೆ ತಲೆ ಕೆಡಿಸಿಕೊಂಡ ಅಭಿಮಾನಿಗಳು ಅವರ ಟ್ವೀಟ್ ಗೆ ಪ್ರಶ್ನೆಗಳ ಸುರಿಮಳೆ ಗರೆದಿದ್ದಾರೆ. ಈ ಪೈಕಿ ಓರ್ವ ಅಭಿಮಾನಿ.. ನೀವು ವಿರಾಟ್ ಕೊಹ್ಲಿಯನ್ನು ಗೋಟ್ (ಮೇಕೆ) ಎಂದು ಕರೆದಿದ್ದೀರಿ.. ಕೊಹ್ಲಿ.. ಲಾರಾ, ಸಚಿನ್, ಬ್ರಾಡ್ಮನ್ ಗಿಂತಲೂ ಶ್ರೇಷ್ಠ ಆಟಗಾರರೇ..! ಎಂದು ಪ್ರಶ್ನಿಸಿದ್ದಾರೆ. 
ಇದಕ್ಕೆ ಉತ್ತರ ನೀಡಿರುವ ವಾನ್, ಹೌದು.. ಕೊಹ್ಲಿ ಏಕದಿನ ಕ್ರಿಕೆಟ್ ಶ್ರೇಷ್ಠ ಆಟಗಾರ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಕೇವಲ 95 ಎಸೆತಗಳಲ್ಲಿ 123 ರನ್ ಸಿಡಿಸಿದ್ದರು. ಅಲ್ಲದೆ ಇದು ಅವರ ಏಕದಿನ ಕ್ರಿಕೆಟ್ ವೃತ್ತಿ ಜೀವನದ 41 ಶತಕ ಕೂಡ ಆಗಿತ್ತು. ಅಂತೆಯೇ ಕ್ಯಾಪ್ಟನ್ ಕೊಹ್ಲಿ ನಾಯಕರಾಗಿ ಅತಿವೇಗವಾಗಿ 4000 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!