ಕ್ರಿಕೆಟ್

ಐಸಿಸಿ ವಿಶ್ವಕಪ್ 2019: 'ಗೋಡ್ಯಾಡಿ' ಅಧಿಕೃತ ಪ್ರಾಯೋಜಕ

Nagaraja AB

ನವದೆಹಲಿ: ಮೇ ತಿಂಗಳಿನಿಂದ ಆರಂಭವಾಗಲಿರುವ 12 ನೇ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪ್ರಾಯೋಜಕತ್ವವನ್ನು ಇಂಟರ್ನೆಟ್  ಹೆಸರುಗಳು ಮತ್ತು ನೋಂದಣಿ ಮ್ಯಾನೇಜ್ ಮೆಂಟ್ ಬೃಹತ್  ಕಂಪನಿ ಗೋಡ್ಯಾಡಿ ಇಂಕ್ ವಹಿಸಿಕೊಂಡಿದೆ. ಅಧಿಕೃತವಾಗಿ ಈ ವಿಷಯವನ್ನು ಇಂದು ಬಹಿರಂಗಗೊಳಿಸಲಾಗಿದೆ.

ಭಾರತದ 700 ಮಿಲಿಯನ್  ಪ್ರೇಕ್ಷಕರನ್ನು ತಲುಪುವ ಭರವಸೆ ಇದೆ. ಈ ಪ್ರಾಯೋಜಕತ್ವ ಮೂಲಕ ಭಾರತ ಸೇರಿದಂತೆ ಎರಡು ಮೂರು ರಾಷ್ಟ್ರಗಳು ಕ್ರಿಕೆಟ್ ವೀಕ್ಷಿಸಬಹುದಾಗಿದೆ. ಈ ಸಹಭಾಗಿತ್ವದಿಂದಾಗಿ ನಮ್ಮಗೆ ದೊಡ್ಡ ಪ್ರಚಾರ ಸಿಗಲಿದೆ ಎಂದು ಗೋಡ್ಯಾಡಿ ಇಂಡಿಯಾ ಕಂಪನಿ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ನಿಕಿಲ್ ಅರೋರಾ ತಿಳಿಸಿದ್ದಾರೆ.

ಈ ಕಂಪನಿ ಮೊದಲ ಬಾರಿಗೆ ಮೇ ಹಾಗೂ ಜುಲೈ ತಿಂಗಳಲ್ಲಿ ಇಂಗ್ಲೆಂಡ್ ಹಾಗೂ ವೆಲ್ಸ್ ನಲ್ಲಿ ನಡೆಯಲಿರುವ  ಅಂತಾರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ.

ಭಾರತದಲ್ಲಿ ಕ್ರಿಕೆಟ್ ಅಚ್ಚುಮೆಚ್ಚಿನ  ಕ್ರೀಡೆಯಾಗಿದೆ. ದೇಶದಲ್ಲಿ ನೋಡುಗರ ಸಂಖ್ಯೆಯೂ ಹೆಚ್ಚಿದ್ದು, ಎರಡು ಹಾಗೂ ಮೂರನೇ ಹಂತದ ನಗರಗಳಲ್ಲೂ ನಮ್ಮ ಪ್ರೇಕ್ಷಕರನ್ನು ತಲುಪಲು ಗೋಡ್ಯಾಡಿ ಅವಕಾಶ ನೀಡಲಿದೆ.ಸಣ್ಣ ಉದ್ದಿಮೆದಾರರು, ಚಿತ್ರೋದ್ಯಮದವರು ಈ ಆನ್ ಲೈನ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನೆರವು ನೀಡಲಿದೆ ಎಂದು ಅರೋರಾ ಹೇಳಿದ್ದಾರೆ.

ಗೋಡ್ಯಾಡಿಯೊಂದಿಗೆ 2019 ಕ್ರಿಕೆಟ್ ವಿಶ್ವಕಪ್ ಪ್ರಾಯೋಜಕತ್ವ ದೊರೆತಿರುವುದರಿಂದ ತುಂಬಾ ಖುಷಿಯಾಗಿದೆ.ಇದರಿಂದಾಗಿ ಕ್ರೀಡೆಗಳ ಬಲವರ್ಧನೆ ಹಾಗೂ ಉದ್ಯಮಿಗಳಿಗೆ ಸ್ಪೂರ್ತಿ ಸಿಗಲಿದೆ ಎಂದು ಐಸಿಸಿ ಕಮರ್ಷಿಯಲ್ ಜನರಲ್ ಮ್ಯಾನೇಜರ್ ಕ್ಯಾಂಪ್ ಬೆಲ್ ಜೇಮೀಸನ್  ತಿಳಿಸಿದ್ದಾರೆ.

SCROLL FOR NEXT