ಕ್ರಿಕೆಟ್

ಟಿ-20 ಶ್ರೇಯಾಂಕ: 5ನೇ ಸ್ಥಾನಕ್ಕೇರಿದ ಕೆ.ಎಲ್‌ ರಾಹುಲ್‌; ಅಗ್ರಸ್ಥಾನದಲ್ಲಿ ಯಾರು? ಇಲ್ಲಿದೆ ಮಾಹಿತಿ

Srinivas Rao BV
ದುಬೈ: ಆಸ್ಟ್ರೇಲಿಯಾ ವಿರುದ್ಧ ಕಳೆದ ಎರಡು ಟಿ-20 ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌, ಇಂದು ಐಸಿಸಿ ಬಿಡುಗಡೆ ಮಾಡಿದ ಚುಟುಕು ಮಾದರಿಯ ಬ್ಯಾಟಿಂಗ್‌ ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ.
ಟಿವಿ ಶೋವೊಂದರಲ್ಲಿ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಾರ್ದಿಕ್‌ ಪಾಂಡ್ಯ ಜತೆ ರಾಹುಲ್‌ ಕೂಡ ಕೆಲವು ಪಂದ್ಯಗಳಿಗೆ ಬ್ಯಾನ್‌ ಆಗಿದ್ದರು. ನಂತರ, ತಂಡಕ್ಕೆ ಮರಳಿದ ಅವರು, ಆಸೀಸ್‌ ವಿರುದ್ಧ ಮೊದಲನೇ ಹಾಗೂ ಎರಡನೇ ಟಿ-20 ಪಂದ್ಯಗಳಲ್ಲಿ ಕ್ರಮವಾಗಿ 47 ಹಾಗೂ 50 ರನ್‌ ಗಳಿಸಿದ್ದರು. ಒಟ್ಟು 726 ಅಂಕಗಳೊಂದಿಗೆ ರಾಹುಲ್‌, ಐಸಿಸಿ ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ.
ಆಸೀಸ್‌ ಚುಟುಕು ಸರಣಿಗೆ ವಿಶ್ರಾಂತಿ ಪಡೆದಿದ್ದ ಕುಲ್ದೀಪ್‌ ಯಾದವ್‌ ಐದನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಪಾಕಿಸ್ತಾನದ ಬಾಬರ್‌ ಅಜಾಮ್‌ ಹಾಗೂ ಅಫ್ಘಾನಿಸ್ತಾನದ ಆದಿಲ್‌ ರಶೀದ್‌ ಅವರು ಕ್ರಮವಾಗಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. 
135 ಅಂಕಗಳೊಂದಿಗೆ ಪಾಕಿಸ್ತಾನ ಟಿ-20 ತಂಡದ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದೆ. ಆದರೆ, ಭಾರತ 122 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ.
SCROLL FOR NEXT