ಕ್ರಿಕೆಟ್

5ನೇ ಏಕದಿನ ಪಂದ್ಯ; ಸಿರೀಸ್ ಡಿಸೈಡರ್ ಮ್ಯಾಚ್ ನಲ್ಲಿ ಟಾಸ್ ಗೆದ್ದ ಆಸಿಸ್ ಬ್ಯಾಟಿಂಗ್ ಆಯ್ಕೆ!

Srinivasamurthy VN
ನವದೆಹಲಿ: ಭಾರತ ತಂಡದ ವಿರುದ್ಧ ಅಂತಿಮ ಹಾಗೂ 5ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತರೂ ಆ ಬಳಿಕ 2 ಪಂದ್ಯಗಳಲ್ಲಿ ರೋಚಕ ಜಯ ಗಳಿಸುವ ಮೂಲಕ ಆಸಿಸ್ ಪಡೆ ಗೆಲುವಿನ ಟ್ರ್ಯಾಕ್ ಮರಳಿದ್ದು, ಈ ಪಂದ್ಯವನ್ನೂ ಗೆದ್ದು ಹ್ಯಾಟ್ರಿಕ್ ಗೆಲುವಿನ ಮೂಲಕ ಸರಣಿ ಕೈ ವಶ ಮಾಡಿಕೊಂಡು ತವರಿಗೆ ಮರಳುವ ವಿಶ್ವಾಸದಲ್ಲಿದೆ. ಅಂತೆಯೇ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಆ ಬಳಿಕ ಎರಡು ಪಂದ್ಯಗಳಲ್ಲಿ ತಾನೇ ಮಾಡಿದ್ದ ಯಡವಟ್ಟುಗಳಿಂದಾಗಿ ಸೋಲು ಕಂಡಿದ್ದ ಭಾರತ ಈ ಪಂದ್ಯದಲ್ಲಿ ತನ್ನ ತಪ್ಪುಗಳನ್ನು ಸುಧಾರಿಸಿಕೊಂಡು ಆಡಿ ಪಂದ್ಯ ಗೆಲ್ಲುವುದರೊಂದಿಗೆ ಸರಣಿ ಕೈವಶ ಮಾಡಿಕೊಂಡು ವಿಶ್ವಕಪ್ ಗೆ ತಯಾರಿ ನಡೆಸಲು ಮುಂದಾಗಿದೆ.
ಒಟ್ಟಾರೆ ಇಂದಿನ ಸಿರೀಸ್ ಡಿಸೈಡರ್ ಮ್ಯಾಚ್ ವಿಶ್ವಕಪ್ ಗೆ ಪೂರ್ವಭಾವಿ ತರಬೇತಿ ಪಂದ್ಯವಾಗಿ ಮಾತ್ರವೇ ಅಲ್ಲದೇ ಸರಣಿ ಯಾರ ಮುಡಿಗೇರಲಿದೆ ಎಂಬ ವಿಚಾರದಿಂದಾಗಿಯೂ ಮಹತ್ವ ಪಡೆದುಕೊಂಡಿದೆ.
ತಂಡಗಳು ಇಂತಿವೆ
ಭಾರತ
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕೇದಾರ ಜಾಧವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ
ಆಸ್ಟ್ರೇಲಿಯಾ
ಆರನ್ ಫಿಂಚ್ (ನಾಯಕ), ಉಸ್ಮಾನ್ ಖವಾಜಾ, ಪೀಟರ್ ಹ್ಯಾಂಡ್ಸ್ಕಾಂಬ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಆಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೆಯೀ ರಿಚರ್ಡ್ಸನ್, ಪ್ಯಾಟ್ ಕಮ್ಮಿನ್ಸ್, ಆಡಮ್ ಜಂಪಾ, ನಾಥನ್ ಲಿಯಾನ್
SCROLL FOR NEXT