ಕ್ರಿಕೆಟ್

ಅಂತಿಮ ಪಂದ್ಯದಲ್ಲೂ ಭಾರತಕ್ಕೆ ಸೋಲು, 3-2 ರಿಂದ ಸರಣಿ ಗೆದ್ದ ಆಸ್ಟ್ರೇಲಿಯಾ

Nagaraja AB

ನವದೆಹಲಿ: ಪಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಅಂತಿಮ ಹಾಗೂ ನಿರ್ಣಾಯಕ 5ನೇ  ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 35 ರನ್ ಗಳಿಂದ ಗೆಲುವು ಸಾಧಿಸಿದೆ.  ಈ ಮೂಲಕ 3-2 ಅಂತರದಿಂದ ಸರಣಿಯನ್ನು ಮುಡಿಗೇರಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. 273 ರನ್ ಗಳ ಗುರಿ ಬೆನ್ನಟ್ಟಿದ ಭಾರತ ನಿಗದಿತ 50 ಓವರ್ ಗಳಲ್ಲಿ 237 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಯಿತು.

 ಭಾರತ 15 ರನ್ ಗಳಿಸುವಷ್ಟರಲ್ಲಿ   ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. 68 ರನ್ ಆಗುವಷ್ಟರಲ್ಲಿ ಕೊಹ್ಲಿಯ ವಿಕೆಟ್ ಹೋಗಿ ಇನ್ನಷ್ಟು ಆಘಾತ ಎದುರಿಸಿತು. 132 ರನ್ ಆಗುವಷ್ಟರಲ್ಲಿ ಪ್ರಮುಖ ಆರು ವಿಕೆಟ್ ಗಳನ್ನು ಕಳೆದುಕೊಂಡು ಸೋಲಿಗೆ ಸುಳಿಗೆ ಸಿಲುಕಿತು.

7ನೇ ವಿಕೆಟ್ ಗೆ ಜೊತೆಯಾದ ಕೆದಾರ್ ಜಾಧವ್ ಮತ್ತು ಭುವನೇಶ್ವರಿ ಭರ್ಜರಿ 91 ರನ್ ಗಳ ಜೊತೆಯಾಟದಿಂದ ಗೆಲುವಿನ ಆಸೆ ಮೂಡಿಸಿದರು. ಆದರೆ, 44 ರನ್ ಗಳಿಸಿದ್ದ ಜಾಧವ್ ಮತ್ತು 46 ರನ್ ಗಳಿಸಿದ್ದ ಭುವನೇಶ್ವರ್ ಕುಮಾರ್  ಒಬ್ಬರ ಹಿಂದೆ ಒಬ್ಬರಂತೆ ನಿರ್ಗಮಿಸಿದರು.

ರೋಹಿತ್ ಶರ್ಮಾ 56, ಶಿಖರ್ ಧವನ್ 12, ಕೊಹ್ಲಿ 20, ರಿಷಭ್ ಪಂತ್ 16, ವಿಜಯ್ ಶಂಕರ್ 16, ರನ್ ಗಳಿಸಿದರೆ ರವೀಂದ್ರ ಜಡೇಜಾ ಶೂನ್ಯಕ್ಕೆ ಔಟಾದರು. ಮೊಹಮ್ಮದ್ ಶಮಿ 3, ಕುಲದೀಪ್ ಯಾದವ್ 8, ಬೂಮ್ರಾ 1 ರನ್ ಗಳಿಸಿದರು.

ಆಸೀಸ್  ಬೌಲಿಂಗ್ ನಲ್ಲಿ ಝಂಪಾ 3 ವಿಕೆಟ್, ಕ್ಯುಮಿನ್ಸ್  , ರಿಚರ್ಡ್ ಸನ್, ಮತ್ತು ಸ್ಟೊಯಾನಿಸ್ ತಲಾ 2 ವಿಕೆಟ್ ಪಡೆದರು.ನಥನ್ ಲಯನ್ 1 ವಿಕೆಟ್ ಪಡೆದರು. ಆಸೀಸ್ ಪರ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಭರ್ಜರಿ ಶತಕ ಸಿಡಿದರು. ಅರೋನ್ ಫಿಂಚ್ 27, ಹ್ಯಾಂಡ್ಸ್ ಕೊಂಬ್ 52, ಮ್ಯಾಕ್ಸ್ ವೆಲ್ 1, ಸ್ಟೊಯ್ ನೀಸ್ 20, ಟರ್ನರ್ 20,  ರಿಚರ್ಡ್ ಸನ್ ಅಜೇಯ 29, ನಥನ್ ಲಯನ್ 1 ರನ್ ಗಲಿಸಿದರು.

ಭಾರತದ ಪರ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ 3, ಮೊಹಮ್ಮದ್ ಶಮಿ 2, ಕುಲದೀಪ್ ಯಾದವ್  1, ರವೀಂದ್ರ ಜಡೇಜಾ 2 ವಿಕೆಟ್ ಪಡೆದರು.

SCROLL FOR NEXT