ಕ್ರಿಕೆಟ್

ಟೀಂ ಇಂಡಿಯಾಗೆ 4ನೇ ಕ್ರಮಾಂಕದ ಚಿಂತೆ; ಪಾಂಟಿಂಗ್ ಕೊಟ್ಟ ಅಚ್ಚರಿ ಸಲಹೆ, ವರ್ಕೌಟ್ ಆಗುತ್ತಾ?

Vishwanath S
ನವದೆಹಲಿ: ಮುಂಬರುವ ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ 4ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಾಗಿ ಚಿಂತೆ ಶುರುವಾಗಿದೆ. ನಾಲ್ಕನೇ ಕ್ರಮಾಂಕದಲ್ಲಿ ಆಡುವ ಆಟಗಾರರು ಸ್ಥಿರ ಪ್ರದರ್ಶನ ನೀಡದಿರುವುದೇ ಇದಕ್ಕೆ ಕಾರಣ.
ಇತ್ತೀಚೆಗಷ್ಟೇ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಇನ್ನು ವಿಶ್ವಕಪ್ ಗೆ ಪೂರ್ವಭಾವಿಯಾಗಿದ್ದ ಈ ಸರಣಿಯಲ್ಲೇ ಟೀಂ ಇಂಡಿಯಾ ಸೋಲು ಕಂಡಿರುವುದು ಆಯ್ಕೆ ಸಮಿತಿಯ ನಿದ್ದೆ ಗೆಡಿಸಿದೆ. 
ಇನ್ನು ಅಂಬಾಟಿ ರಾಯುಡು, ವಿರಾಟ್ ಕೊಹ್ಲಿ, ರಿಷಬ್ ಪಂತ್ ರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿದರು ಪ್ರಯೋಜನವಾಗಲಿಲ್ಲ. ಇದೀಗ ಈ ಸ್ಥಾನಕ್ಕೆ ಸೂಕ್ತ ಆಟಗಾರನೋರ್ವನನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸೂಚಿಸಿದ್ದಾರೆ. ರಿಕ್ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಈ ಸ್ಥಾನಕ್ಕೆ ಉತ್ತಮ ಎಂದು ಹೇಳಿದ್ದಾರೆ.
ಅಯ್ಯರ್ ಓರ್ವ ಅದ್ಭುತ ಪ್ಲೇಯರ್. ದೇಶಿಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅವರು ಟೀಂ ಇಂಡಿಯಾದಿಂದ ಕಣಕ್ಕಿಳಿಯಬೇಕು ಎಂದಿದ್ದಾರೆ ಅಥವಾ ಕೆಎಲ್ ರಾಹುಲ್ ಕೂಡ ಈ ಜಾಗಕ್ಕೆ ಸೂಕ್ತ ಎಂಬ ಮಾಹಿತಿ ನೀಡಿದ್ದಾರೆ.
SCROLL FOR NEXT