ಕ್ರಿಕೆಟ್

ಐಸಿಸಿ ಏಕದಿನ ಶ್ರೇಯಾಂಕ ಬಿಡುಗಡೆ: ವಿರಾಟ್ ಕೊಹ್ಲಿಗೆ ಅಗ್ರ ಸ್ಥಾನ, ರೋಹಿತ್ ದ್ವಿತೀಯ!

Srinivas Rao BV
ಪುರುಷರ ವಿಭಾಗದ ಐಸಿಸಿ ಏಕದಿನ ಶ್ರೇಯಾಂಕ ಬಿಡುಗಡೆಯಾಗಿದ್ದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಮೊದಲ ಎರಡು ಸ್ಥಾನದಲ್ಲಿದ್ದಾರೆ. 
ಮಾ.17 ರಂದು ಐಸಿಸಿ ಶ್ರೇಯಾಂಕ ಬಿಡುಗಡೆಯಾಗಿದ್ದು, ಇತ್ತೀಚಿನ ಸರಣಿಗಳಲ್ಲಿ ವಿವಿಧ ತಂಡಗಳ ಬ್ಯಾಟ್ಸ್ಮನ್ ಗಳ ಪ್ರದರ್ಶನವನ್ನೂ ಆಧರಿಸಲಾಗಿದೆ. 
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಕ್ರಮವಾಗಿ ಒಟ್ಟಾರೆ 310 ಹಾಗೂ 202 ರನ್ ಗಳನ್ನು ದಾಖಲಿಸಿದ್ದರು. ಸರಣಿಯನ್ನು ಭಾರತ 3-2 ಅಂತರದಿಂದ ಸೋತಿತ್ತು.
ಇದೇ ವೇಳೆ ದಕ್ಷಿಣ ಆಫ್ರಿಕಾ ಪ್ರಾರಂಭಿಕ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕೊಕ್ 4 ನೇ ಸ್ಥಾನದಲ್ಲಿದ್ದು, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 5-0 ಅಂತರದಿಂದ ತಮ್ಮ ತಂಡ ಗೆಲ್ಲುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವೆಸ್ಟ್ ಇಂಡೀಸ್ ನ ಪ್ರಾರಂಭಿಕ ಆಟಗಾರ ಕ್ರಿಸ್ ಗೇಲ್ 41 ನೇ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್ ನ ಬ್ಯಾಟ್ಸ್ಮನ್ ಮಾರ್ಟಿನ್ ಗುಪ್ಟಿಲ್ 19 ನೇ ಸ್ಥಾನದಿಂದ 9 ನೇ ಸ್ಥಾನಕ್ಕೆ ಜಿಗಿದಿದ್ದು, ಅಫ್ಘಾನಿಸ್ಥಾನದ ನಾಯಕ ಅಸ್ಗರ್ ಅಫ್ಘನ್ 87 ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ನ್ಯೂಜಿಲ್ಯಾಂಡ್ ನ ವೇಗಿ ಟ್ರೆಂಟ್ ಬೌಲ್ಟ್ 2 ನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಹೀರ್ 4 ನೇ ಸ್ಥಾನದಲ್ಲಿದ್ದಾರೆ.
SCROLL FOR NEXT