ಚೆನ್ನೈ: ವೈಯಕ್ತಿಕ ಕಾರಣಗಳಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ಡೇವಿಡ್ ವಿಲ್ಲೆ ಪ್ರಸಕ್ತ ಆವೃತ್ತಿಯ ಇಂಡಿಯನ್ ಟೂರ್ನಿಯಿಂದ ಹೊರ ನಡೆಯುತ್ತಿದ್ದಾರೆ
ಕಳೆದ ಆವೃತ್ತಿಯ ಮೂರು ಪಂದ್ಯಗಳಾಡಿದ್ದ ಇಂಗ್ಲೆಂಡ್ ಕ್ರಿಕೆಟಿಗ ವಿಲ್ಲೆ, ಅನಿರೀಕ್ಷಿತ ಕೌಟುಂಬಿಕ ಕಾರಣಗಳಿದ ಐಪಿಎಲ್ ಟೂರ್ನಿಯಿಂದ ಹೊರ ನಡೆಯುತ್ತಿದ್ದೇನೆ ಎಂದು ಯಾರ್ಕ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.
“ಎರಡನೇ ಮಗುವಿಗೆ ಜನ್ಮ ನೀಡುವ ಹೊಸ್ತಿಲಲ್ಲಿರುವ ತನ್ನ ಪತ್ನಿ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಹಾಗಾಗಿ, ತವರಿಗೆ ಮರಳುತ್ತಿದ್ದೇನೆ. ಮೊದಲು ನನ್ನ ಕುಟುಂಬಕ್ಕೆ ಪ್ರಾಶಸ್ತ್ಯ ನೀಡುತ್ತೇನೆ. ಎರಡನೇಯದಾಗಿ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡುತ್ತೇನೆ. ಚೆನ್ನೈ ತಂಡದಲ್ಲಿ ಹೊಂದಾಣಿಕೆ ಹಾಗೂ ಸಹಕಾರ ಉತ್ತಮವಾಗಿದೆ. ಹಾಗಾಗಿ, ಇಂಥ ಕಠಿಣ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು 29ರ ಪ್ರಾಯದ ಡೇವಿಡ್ ವಿಲ್ಲೆ ಹೇಳಿದ್ದಾರೆ.