ಕ್ರಿಕೆಟ್

ಆರ್‌ಸಿಬಿ ವಿರುದ್ಧ ವಿಶೇಷ ದಾಖಲೆ ಬರೆದ ಬೈರ್ಸ್ಟೋವ್-ಡೇವಿಡ್ ವಾರ್ನರ್, ಯಾವುದು ಆ ದಾಖಲೆ?

Vishwanath S
ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಗ್ರಹಗತಿ ಕೆಟ್ಟಂತೆ ಕಾಣುತ್ತಿದೆ. ಹೌದು ಆರ್‌ಸಿಬಿ ವಿರುದ್ಧ ಎದುರಾಳಿ ತಂಡದ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದು ವಿಶೇಷ ದಾಖಲೆಗಳನ್ನು ಬರೆಯುತ್ತಿದ್ದಾರೆ.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದಾಗಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೈರ್ಸ್ಟೋವ್(114) ಮತ್ತು ಡೇವಿಡ್ ವಾರ್ನರ್ ಅಜೇಯ 100 ರನ್ ಪೇರಿಸಿದ್ದಾರೆ. ಒಂದೇ ತಂಡದ ಇಬ್ಬರು ಬ್ಯಾಟ್ಸ್ ಮನ್ ಗಳು ತಲಾ ಶತಕ ಬಾರಿಸಿ ದಾಖಲಿಸಿದ್ದಾರೆ. 
ಬೈರ್ಸ್ಟೋವ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು 56 ಎಸೆತಗಳಲ್ಲಿ 7 ಸಿಕ್ಸರ್, 12 ಬೌಂಡರಿ ಸಿಡಿಸಿ 114 ರನ್ ಬಾರಿಸಿದ್ದರೆ ಡೇವಿಡ್ ವಾರ್ನರ್ 55 ಎಸೆತಗಳಲ್ಲಿ 5 ಸಿಕ್ಸರ್, 5 ಬೌಂಡರಿ ಸಿಡಿಸಿ 100 ರನ್ ಬಾರಿಸಿದ್ದಾರೆ. 
ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 231 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
SCROLL FOR NEXT