ದುಬೈನಲ್ಲಿ ಇರಾನ್ ಡಬಲ್ ಸ್ಟ್ರೈಕ್: US ಆರ್ಮಿ ಕಟ್ಟಡ, ಆಸ್ಟ್ರೇಲಿಯಾದ ವಾಯುನೆಲೆ ಮೇಲೆ ದಾಳಿ!

ಮತ್ತೊಂದೆಡೆ ಅಲ್ ಮಿನ್ಹಾದ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ವಾಯುನೆಲೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದುಬೈ ಬಳಿಯ ಅಲ್ ಮಿನ್ಹಾದ್‌ನಲ್ಲಿರುವ ಆಸ್ಟ್ರೇಲಿಯಾದ ಮಿಲಿಟರಿ ಕಟ್ಟಡದ ಮೇಲೆ ದಾಳಿ ನಡೆಸಲಾಗಿದೆ.
Iran has claimed that its operations in the Gulf are only aimed at American troops
ಗಲ್ಫ್‌ನಲ್ಲಿ ಅಮೆರಿಕದ ಸೈನಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ಇರಾನ್ ಹೇಳಿದೆ
Updated on

ದುಬೈ: ಗಲ್ಫ್‌ನಲ್ಲಿ ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷ ತಾರಕಕ್ಕೇರಿದೆ. ದುಬೈನಲ್ಲಿ ಟಾರ್ಗೆಟ್ ಮಾಡಲಾಗಿದ್ದ ಅಮೆರಿಕ ಮತ್ತು ಆಸ್ಟ್ರೇಲಿಯ ಪಡೆಗಳಿಗೆ ಸಂಬಂಧಿಸಿದ ಕಟ್ಟಡಗಳ ಮೇಲೆ ದಾಳಿಯಾಗಿದೆ. ದುಬೈನಲ್ಲಿ ಅಮೆರಿಕ ಪಡೆಗಳಿಗೆ ಸೇರಿದ್ದು ಎನ್ನಲಾದ ಕಟ್ಟಡವೊಂದನ್ನು ಇರಾನ್ ಧ್ವಂಸಗೊಳಿಸಿದೆ.

ಆದಾಗ್ಯೂ, ಹಾನಿಗೊಳಗಾದ ಕಟ್ಟಡದ ಸ್ವರೂಪ ಅಥವಾ ಹಾನಿ ಪ್ರಮಾಣ, ಸಾವು ನೋವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಗಲ್ಫ್‌ನಲ್ಲಿ ಕೇವಲ ಅಮೇರಿಕನ್ ಪಡೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ಇರಾನ್‌ನ ಅಧಿಕೃತ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಈ ಬೆಳವಣಿಯಾಗಿದೆ.

ಮತ್ತೊಂದೆಡೆ ಅಲ್ ಮಿನ್ಹಾದ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ವಾಯುನೆಲೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದುಬೈ ಬಳಿಯ ಅಲ್ ಮಿನ್ಹಾದ್‌ನಲ್ಲಿರುವ ಆಸ್ಟ್ರೇಲಿಯಾದ ಮಿಲಿಟರಿ ಕಟ್ಟಡದ ಮೇಲೆ ದಾಳಿ ನಡೆಸಲಾಗಿದೆ.

ಆಸ್ಟ್ರೇಲಿಯಾದ ಸಿಬ್ಬಂದಿ ನಿಯೋಜಿಸಿರುವ ಅಲ್ ಮಿನ್ಹಾದ್ ಏರ್ ಬೇಸ್ ಅನ್ನು ಇರಾನ್ ಹೊಡೆದಿದೆ ಎಂದು ನಮ್ಮ ಸೈನಿಕರು ಸುರಕ್ಷಿತವಾಗಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಆಸ್ಟ್ರೇಲಿಯದ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ತಿಳಿಸಿದ್ದಾರೆ.

ಮಧ್ಯಪ್ರಾಚ್ಯದಾದ್ಯಂತ ನಾವು 100 ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದ್ದೇವೆ, ಅವರಲ್ಲಿ ಹೆಚ್ಚಿನವರು ಯುಎಇಯಲ್ಲಿದ್ದಾರೆ. ಅಲ್ ಮಿನ್ಹಾದ್‌ನಲ್ಲಿ ಹಲವು ವರ್ಷಗಳಿಂದ ಪ್ರಧಾನ ಕಚೇರಿ ಹೊಂದಿರುವುದಾಗಿ ಅವರು ಕ್ಯಾನ್‌ಬೆರಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಗಲ್ಫ್ ರಾಷ್ಟ್ರಗಳಲ್ಲಿ ಇರಾನ್‌ನಿಂದ ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿ ಬಗ್ಗೆ ವರದಿಯಾಗಿದೆ.

Iran has claimed that its operations in the Gulf are only aimed at American troops
ಇರಾಕ್‌ನಲ್ಲಿ US ಪಡೆ ತಂಗಿದ್ದ ಹೋಟೆಲ್ ಮೇಲೆ ಇರಾನ್ ಬೆಂಬಲಿತ ಗುಂಪು ದಾಳಿ!

ಅಮೆರಿಕಾದ ಮಿಲಿಟರಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. "ಟ್ರುಥ್‌ಫುಲ್ ಪ್ರಾಮಿಸ್ 4" ಕಾರ್ಯಾಚರಣೆಯ ಭಾಗವಾಗಿ ಯುಎಸ್ ನೆಲೆಗಳು ಮತ್ತು ಅದರ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com