ಅತ್ಯಾಚಾರ ಪ್ರಕರಣ: ಆಸಿಸ್ ಕ್ರಿಕೆಟಿಗನಿಗೆ 5 ವರ್ಷ ಜೈಲು ಶಿಕ್ಷೆ!
ಕ್ರಿಕೆಟ್ ಟೂರ್ನಿ ಆಡಲೆಂದು ಇಂಗ್ಲೆಂಡ್ ಆಗಮಿಸಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗನಿಗೆ ಇಂಗ್ಲೆಂಡ್ ನ್ಯಾಯಾಲಯ ಅತ್ಯಾಚಾರ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಲಂಡನ್: ಕ್ರಿಕೆಟ್ ಟೂರ್ನಿ ಆಡಲೆಂದು ಇಂಗ್ಲೆಂಡ್ ಆಗಮಿಸಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗನಿಗೆ ಇಂಗ್ಲೆಂಡ್ ನ್ಯಾಯಾಲಯ ಅತ್ಯಾಚಾರ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಲೆಕ್ಸ್ ಹೆಪ್ಬರ್ನ್ ಎಂಬ 23 ವರ್ಷದ ಉದಯೋನ್ಮುಖ ಆಟಗಾರನಿಗೆ ಬ್ರಿಟೀಷ್ ನ್ಯಾಯಾಲಯ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಮೂಲಗಳ ಪ್ರಕಾರ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಿಯಲ್ಲಿ ಅಲೆಕ್ಸ್ ಹೆಪ್ಬರ್ನ್ ವರ್ಸೆಸ್ಟ್ ಶೈರ್ ತಂಡವನ್ನು ಪ್ರತಿನಿಧಿಸುತ್ತಿದ್ದ ಎಂದು ತಿಳಿದುಬಂದಿದೆ. ಕ್ರಿಕೆಟ್ ಟೂರ್ನಿ ನಿಮಿತ್ತ ಇಂಗ್ಲೆಂಡ್ ಗೆ ಆಗಮಿಸಿದ್ದ ಆತ ತನ್ನ ಸಹ ಆಟಗಾರನ ರೂಮಿಗೆ ಮಹಿಳೆಯೊಬ್ಬರನ್ನು ಕರೆತಂದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ತಿಳಿದುಬಂದಿದೆ.
ಅತ್ಯಾಚಾರಕ್ಕೆ ಕಾರಣವಾಗಿತ್ತು ಮೊಬೈಲ್ ಗೇಮ್
ಇನ್ನು ಅತ್ಯಾಚಾರಕ್ಕೆ ಕ್ರಿಕೆಟಿಗನ ಮೊಬೈಲ್ ನಲ್ಲಿದ್ದ ಗೇಮ್ ಕಾರಣ ಎಂದು ಪೊಲೀಸರು ಶಂಕಿಸಿದ್ದು, ಮಾರಕ ಬ್ಲೂವೇಲ್ ನಂತೆಯೇ ಮತ್ತೊಂದು ಮೊಬೈಲ್ ಗೇಮ್ ನಲ್ಲಿ ಈತನಿಗೆ ಲೈಂಗಿಕತೆಯ ವಿಡಿಯೋ ಮತ್ತು ವಿಚಾರಗಳನ್ನು ಸಂಗ್ರಹಿಸುವಂತೆ ಮೊಬೈಲ್ ಗೇಮ್ ನಲ್ಲಿ ಟಾಸ್ಕ್ ನೀಡಲಾಗಿತ್ತಂತೆ. ಅದನ್ನು ಪೂರ್ಣಗೊಳಿಸಲು ನಾನು ಅತ್ಯಾಚಾರ ಮಾಡಿದ್ದೇನೆ ಎಂದು ಹೆಪ್ಬರ್ನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಒಟ್ಟಾರೆ ಈ ಅತ್ಯಾಚಾರ ಪ್ರಕರಣ ಇದೀಗ ಇಂಗ್ಲೆಂಡ್ ನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ.