ದೆಹಲಿ: ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಗಳ ನಡುವೆ ಸಮನ್ವಯದ ಕೊರತೆ ಎದುರಾದರೆ ಅಂತಹ ಸಂದರ್ಭಗಳಲ್ಲಿ ಕೆಲವೊಂದು ವಿಚಿತ್ರ ರನೌಟ್ ಗಳು ನಡೆಯುತ್ತದೆ.
ಹೌದು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ತಂಡದ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಮತ್ತು ಲೂಮ್ರರ್ ನಡುವಿನ ಸಮನ್ವಯದ ಕೊರತೆಯಿಂದ ಸಂಜು ಸ್ಯಾಮ್ಸನ್ ರನೌಟ್ ಬಲೆಗೆ ಸಿಲುಕಿದರು.
ಸಂಜು ಸ್ಯಾಮ್ಸನ್ 5 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಸಿಂಗಲ್ ತೆಗೆದುಕೊಳ್ಳಲು ಮುಂದಾದರೂ ಈ ವೇಳೆ ಬಾ, ಬೇಡ, ಬೇಡ, ಬಾ ಅಂತ ಕೊನೆಗೆ ಸಂಜು ರನೌಟ್ ಆಗಿ ಪೆವಿಲಿಯನ್ ಸೇರಿದರು.