ಕ್ರಿಕೆಟ್

ಭಾರತ ಸಮತೋಲಿತ ತಂಡವನ್ನು ಹೊಂದಿದೆ, ಆದರೆ ವಿಶ್ವಕಪ್ ನಲ್ಲಿ ಎಲ್ಲರೂ ಪ್ರಬಲರೇ: ಜಾಂಟಿ ರೋಡ್ಸ್

Nagaraja AB

ಮುಂಬೈ: 15 ಮಂದಿ ಅದ್ಬುತ ಆಟಗಾರರೊಂದಿಗೆ ಟೀಂ ಇಂಡಿಯಾ ಸಮತೋಲಿತವಾಗಿದೆ. ಆದರೆ, ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಫೇವರಿಟ್ ತಂಡದ ಬಗ್ಗೆ ಸ್ಪಷ್ಟವಾಗಿಲ್ಲ. ಎಲ್ಲರೂ ಪ್ರಬಲರೇ ಎಂದು  ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಆಟಗಾರ ಜಾಂಟಿ ರೋಡ್ಸ್ ಹೇಳಿದ್ದಾರೆ.

2019ರ ವಿಶ್ವಕಪ್ ಟೂರ್ನಿಯ  ರೌಂಡ್ ರಾಬಿನ್ ಮಾದರಿಯಲ್ಲಿ ಎಲ್ಲಾ 10 ತಂಡಗಳು ಪರಸ್ಪರ ಆಟ ಆಡವಾಗಬೇಕಿದೆ. ಅತ್ಯುನ್ನತ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಕ್ಕೆ ಆರ್ಹತೆ ಪಡೆಯಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸಮತೋಲಿತ ತಂಡವಾಗಿದೆ. ಆದರೆ, ಬೇರೆ ಇತರ ರಾಷ್ಟ್ರಗಳನ್ನು ಹೊಂದಿರದಂತಹ ವಿಶೇಷತೆ ಏನೂ ಇಲ್ಲ. ಟೀಂ ಇಂಡಿಯಾ 15 ಅದ್ಬುತ ಆಟಗಾರರನ್ನು ಹೊಂದಿದ್ದರೆ ಇತರ ಆರು ತಂಡಗಳು ಕೂಡಾ ಅದೇ ರೀತಿಯ ಆಟಗಾರರನ್ನು ಹೊಂದಿರುತ್ತವೆ ಎಂದಿದ್ದಾರೆ.

ವಿಶ್ವಕಪ್ ನಲ್ಲಿ ಅತ್ಯಂತ ಬಲಿಷ್ಠ ತಂಡಗಳಿದ್ದು,  ಸಮತೋಲಿನ 11 ಆಟಗಾರರ ತಂಡ ಅಂದಿನ ಪಂದ್ಯದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಜಾಂಟಿ ರೋಡ್ಸ್  ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

ಭಾರತ ತಂಡದಲ್ಲಿ ತುಂಬಾ ಅನುಭವಿ ಆಟಗಾರರಿದ್ದಾರೆ. ಜಸ್ಪ್ರೀತ್ ಬೂಮ್ರಾ ಅವರಂತಹ ಯುವ ಆಟಗಾರರು ಬೌಲಿಂಗ್ ನಲ್ಲಿ ಹೆಚ್ಚಿನ ಅನುಭವ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಟೀಂ ಇಂಡಿಯಾಕ್ಕೆ ಉತ್ತಮ ಅವಕಾಶವಿದೆ. ಆದರೆ, ಮತ್ತೊಂದೆಡೆ ಅತ್ಯುನ್ನತ  ಆರು ತಂಡಗಳಿರುತ್ತವೆ ಎಂದಿದ್ದಾರೆ.

ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ  ಪಾತ್ರ ಪ್ರಮುಖವಾಗಿದೆ. ಬ್ಯಾಟ್ಸ್ ಮನ್ ಆಗಿ ಬಂದ ಹಾರ್ದಿಕ್ ಪಾಂಡ್ಯ  ಉತ್ತಮ ಬೌಲರ್ ಆಗಿದ್ದು, ವಿಕೆಟ್  ತೆಗೆಯುತ್ತಾರೆ ಎಂದು ಜಾಂಟಿ ರೋಡ್ಸ್  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

SCROLL FOR NEXT