ಎಂಎಸ್ ಧೋನಿ 
ಕ್ರಿಕೆಟ್

ಚೆನ್ನೈ ಸೋಲಿಗೆ ಅನವಶ್ಯಕ ರ'ನ್'ಔಟ್ ಕಾರಣ, ಧೋನಿದೂ ನಿಜಕ್ಕೂ ಔಟಾ? ಈ ವಿಡಿಯೋ ನೋಡಿ!

ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ರನ್ ನಿಂದ ಪರಾಭವಗೊಂಡು ಚಾಂಪಿಯನ್ ಪಟ್ಟ ಕಳೆದುಕೊಂಡಿತು.

ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ರನ್ ನಿಂದ ಪರಾಭವಗೊಂಡು ಚಾಂಪಿಯನ್ ಪಟ್ಟ ಕಳೆದುಕೊಂಡಿತು. ಆದರೆ ಅಸಲಿಗೆ ತಂಡದಲ್ಲಿ ಅನವಶ್ಯಕ ರನ್ ತೆಗೆದುಕೊಳ್ಳಲು ಹೋಗಿ ರನೌಟ್ ಆಗಿದ್ದೆ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.
ಹೈದರಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿಗೆ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮಧ್ಯೆ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ಸಹ ಚೆನ್ನೈ ತಂಡ ಅನವಶ್ಯಕ ರನ್ ಗಳನ್ನು ಕಸಿಯಲು ಹೋಗಿ ರನೌಟ್ ಆಗಿದೆ. ಹೌದು 80 ರನ್ ಪೇರಿಸಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಶೇನ್ ವಾಟ್ಸನ್ ವಿನಾಕಾರಣ ರನ್ ತೆಗೆದುಕೊಳ್ಳಲು ಹೋಗಿ ಪಂದ್ಯದ ಕೊನೆಯಲ್ಲಿ ರನೌಟ್ ಆದರು. 
ಇದಕ್ಕೂ ಮುನ್ನ ಚೆನ್ನೈ ತಂಡ 3 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟ್ ಮಾಡುತ್ತಿದ್ದ ಎಂಎಸ್ ಧೋನಿ 2 ರನ್ ಬಾರಿಸಿದ್ದಾಗ ಬೇಡವಾಗಿದ್ದ ರನ್ ತೆಗೆದುಕೊಳ್ಳಲು ಹೋಗಿ ಇಶನ್ ಕಿಶನ್ ಅವರ ಅದ್ಭುತ ರನೌಟ್ ನಿಂದ ಔಟ್ ಆದರು. ಆದರೆ ಧೋನಿಯ ರನೌಟ್? ಕುರಿತು ಅನುಮಾನಗಳು ಮೂಡಿವೆ. ಒಟ್ಟಿನಲ್ಲಿ ಕೆಲವೊಂದು ತೀರ್ಮಾನಗಳು ಪಂದ್ಯದ ಗತಿಯನ್ನೇ ಬದಲಿಸುತ್ತವೆ ಎಂಬುದಕ್ಕೆ ಈ ಪಂದ್ಯ ಕಾರಣ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT