ಕ್ರಿಕೆಟ್

ಮೈದಾನದಲ್ಲಿ ಧೋನಿ ಕೂಲ್; ಆದರೆ ಅಭ್ಯಾಸದ ವೇಳೆ ಆಟಗಾರರಿಗೆ ಬೆಂಡೆತ್ತುತ್ತಿದ್ದ ಮಾಹಿ, ಯಾಕೆ ಗೊತ್ತ?

Vishwanath S
ಟೀಂ ಇಂಡಿಯಾದ ಕೂಲ್ ಕ್ಯಾಪ್ಟೆನ್ ಎಂದೇ ಖ್ಯಾತಿ ಗಳಿಸಿರುವ ಎಂಎಸ್ ಧೋನಿ ಮೈದಾನದಲ್ಲಿ ಎಷ್ಟೇ ಕೂಲಾಗಿದ್ದರು. ಅಭ್ಯಾಸದ ವೇಳೆ ಆಟಗಾರರನ್ನು ಬೆಂಡೆತ್ತುತ್ತಿದ್ದರು. ಇದಕ್ಕೂ ಒಂದು ಕಾರಣವಿದೆ ಎಂದು ಮಾಜಿ ಕೋಚ್ ಪ್ಯಾಡಿ ಅಪ್ಟನ್ ಹೇಳಿದ್ದಾರೆ.
ಟೀಂ ಇಂಡಿಯಾದ ಮಾಜಿ ಮೆಂಟಲ್ ಕಂಡಿಷನಿಂಗ್ ತರಬೇತುದಾರ ಪ್ಯಾಡಿ ಅಪ್ಟನ್ ಅವರು, ನಾನು ತರಬೇತುದಾರನಾಗಿ ಆಯ್ಕೆಯಾದಾಗ ಟೆಸ್ಟ್ ತಂಡಕ್ಕೆ ಅನಿಲ್ ಕುಂಬ್ಳೆ ನಾಯಕರಾಗಿದ್ದರು. ಇನ್ನು ಎಂಎಸ್ ಧೋನಿ ಏಕದಿನ ತಂಡದ ನಾಯಕರಾಗಿದ್ದರು. ಈ ವೇಳೆ ಆಟಗಾರರು ಶಿಸ್ತಿನಿಂದ ಇರುವಂತೆ ಮಾಡಲು ಧೋನಿ ಮತ್ತು ಅನಿಲ್ ಕುಂಬ್ಳೆ ಅವರು ಅಭ್ಯಾಸ ಹಾಗೂ ತಂಡದ ಸಭೆಗಳಿಗೆ ಲೇಟಾಗಿ ಬರುವ ಆಟಗಾರರಿಗೆ 10 ಸಾವಿರ ರುಪಾಯಿ ದಂಡ ವಿಧಿಸಿದ್ದರು. 
ಇದಕ್ಕೆ ಧೋನಿ 10 ಸಾವಿರ ದಂಡದ ಜೊತೆಗೆ ದೊಡ್ಡ ಶಿಕ್ಷೆಯನ್ನು ನೀಡಬೇಕು ಎಂದು ಹೇಳುತ್ತಿದ್ದರು. ಯಾಕೆಂದರೆ ಯಾವುದೇ ಆಟಗಾರ ಶಿಸ್ತು ಮತ್ತು ಸಂಯಮವನ್ನು ಕಾಪಾಡಿಕೊಂಡರೆ ಅವರಿಂದ ಮೈದಾನದಲ್ಲಿ ಉತ್ತಮ ಪ್ರದರ್ಶನ ಬರುತ್ತದೆ ಎಂದು ಧೋನಿ ನಂಬಿದ್ದರು ಎಂದು ಅಪ್ಟನ್ ಹೇಳಿದ್ದಾರೆ.
ಇದರಿಂದ ಆಟಗಾರರು ಸರಿಯಾದ ಸಮಯಕ್ಕೆ ಅಭ್ಯಾಸಕ್ಕೆ ಬರುತ್ತಿದ್ದರು. ಇದು ಒಂದು ಒಳ್ಳೆಯ ಬೆಳವಣಿಗೆಯಾಗಿತ್ತು ಎಂದು ಅಪ್ಟನ್ ಹೇಳಿದ್ದಾರೆ.
SCROLL FOR NEXT