ಕ್ರಿಕೆಟ್

ತಾನೇ ಹಳ್ಳಕ್ಕೆ ಬಿದ್ದ ಪಾಕ್ ಕ್ರಿಕೆಟಿಗ: ಚೆಂಡಿನ ಬದಲಿಗೆ ವಿಕೆಟ್‌ಗೆ ಹೊಡೆದ ಮಲಿಕ್, ವಿಡಿಯೋ ವೈರಲ್!

Vishwanath S
ದುಬೈ: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ಪಾಕ್ ನ ಶೋಯಬ್ ಮಲಿಕ್ ಅತಿಯಾದ ಆತ್ಮವಿಶ್ವಾಸದಿಂದ ಚೆಂಡನ್ನು ಹೊಡೆಯಲು ಹೋಗಿ ವಿಕೆಟ್ ಗೆ ಬ್ಯಾಟ್ ನಿಂದ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇಂಗ್ಲೆಂಡ್ ಮತ್ತು ಪಾಕಿಸ್ತಾನ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿವೆ. ಈ ಸರಣಿಯ ನಾಲ್ಕನೇ ಪಂದ್ಯದಲ್ಲಿ ಶೋಯಬ್ ಮಲಿಕ್ 26 ಎಸೆತಗಳಲ್ಲಿ 41 ರನ್ ಪೇರಿಸಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ 47ನೇ ಓವರ್ ನಲ್ಲಿ ಮಾರ್ಕ್ ವೂಡ್ ಬೌಲಿಂಗ್ ನಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟು ಚೆಂಡನ್ನು ಹೊಡೆಯಲು ಹೋಗಿ ವಿಕೆಟ್ ಗೆ ಒಡೆದು ಹಿಟ್ ವಿಕೆಟ್ ಆಗಿದ್ದಾರೆ.
ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 340 ರನ್ ಪೇರಿಸಿತ್ತು. 341 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಇನ್ನು ಮೂರು ಎಸೆತ ಬಾಕಿ ಇರುವಂತೆ 341 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಸರಣಿಯಲ್ಲಿ 4-0 ಅಂತರದಿಂದ ಮುನ್ನಡೆ ಸಾಧಿಸಿದೆ. 
SCROLL FOR NEXT