2019ರ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ಬ್ಯಾಟಿಂಗ್ ನಡುವೆ ಬಾಂಗ್ಲಾದೇಶದ ಫೀಲ್ಡಿಂಗ್ ಅನ್ನು ಸೆಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಬಾಂಗ್ಲಾದೇಶದ ಪರ 40ನೇ ಓವರ್ ಅನ್ನು ಬೌಲಿಂಗ್ ಮಾಡಲು ಸಬ್ಬಿರ್ ರೆಹಮಾನ್ ಮುಂದಾದರೂ ಈ ವೇಳೆ ಬೌಲರ್ ಅನ್ನು ತಡೆದ ಧೋನಿ ವಿಡ್-ವಿಕೆಟ್ ನ ಸ್ಕ್ವಯರ್ ಲೇಗ್ ಅನ್ನು ಬದಲಿಸುವಂತೆ ಸೂಚಿಸಿದರು. ಅದೇ ರೀತಿ ರೆಹಮಾನ್ ಫೀಲ್ಡಿಂಗ್ ಚೇಂಚ್ ಮಾಡಿದ ನಂತರ ಬೌಲಿಂಗ್ ಮಾಡಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಎಂಎಸ್ ಧೋನಿ 78 ಎಸೆತಗಳಲ್ಲಿ ಭರ್ಜರಿ 7 ಸಿಕ್ಸರ್ ಹಾಗೂ 8 ಬೌಂಡರಿ ಸೇರಿದಂತೆ 113 ರನ್ ಪೇರಿಸಿ ಔಟಾದರು.
ಅಭ್ಯಾಸ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ ಪೇರಿಸಿತ್ತು. 360 ರನ್ ಗಳ ಗುರಿ ಬೆನ್ನಟ್ಟಿದ್ದ ಬಾಂಗ್ಲಾದೇಶ 264 ರನ್ ಗಳಿಗೆ ಆಲೌಟ್ ಆಗಿ 95 ರನ್ ಗಳಿಂದ ಸೋಲು ಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics