ಕ್ರಿಕೆಟ್

12ನೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ 2019ಕ್ಕೆ ಚಾಲನೆ, ಶುಭ ಕೋರಿದ ರಾಣಿ ಎಲಿಜಬೆತ್

Nagaraja AB

ಲಂಡನ್ : 12ನೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಗೆ ಅದ್ದೂರಿ  ಚಾಲನೆ ದೊರಕಿದೆ.ಬಕಿಂಗ್ ಹ್ಯಾಮ್ ಪ್ಯಾಲೆಸ್ ನಲ್ಲಿ ಬುಧವಾರ ರಾತ್ರಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದ ಔತಣಕೂಟದಲ್ಲಿ ಬ್ರಿಟನ್ ರಾಣಿ ದ್ವಿತೀಯ ಎಲಿಜಬೆತ್  ಅವರು ಎಲ್ಲ ತಂಡಗಳ ನಾಯಕರಿಗೂ ಶುಭ ಕೋರಿದರು.

ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ಇಯಾನ್ ಮಾರ್ಗನ್,  ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ವೆಸ್ಟ್ ಇಂಡೀಸ್  ತಂಡದ ಜೀಸನ್ ಹೋಲ್ಡರ್, ಅಫ್ಗಾನಿಸ್ತಾನದ ಗುಲ್ಬದೀನ್ ನಯೀಬ್, ನ್ಯೂಜಿಲ್ಯಾಂಡ್ ತಂಡಜ ಕೇಕ್ ವಿಲಿಯಮ್ಸ್, ಶ್ರೀಲಂಕಾದ ದಿಮುತ ಕರುಣ ರತ್ನ, ಬಾಂಗ್ಲಾದೇಶದ ಮಷ್ರಪೆ ಮೂರ್ತಜಾ, ದಕ್ಷಿಣ ಆಫ್ರಿಕಾದ ಫಾಪ್ ಡು ಪ್ಲೆಸಿ, ಪಾಕಿಸ್ತಾನದ ಸರ್ಫರಾಜ್  ಅಹಮದ್ ಅವರನ್ನೊಂದಿಗೆ ರಾಣಿ ಎಲಿಜಬೆತ್ ಪೋಟೋ ತೆಗೆಸಿಕೊಂಡರು.

ಬಿಸಿಸಿಐ ಟ್ವೀಟರ್ ನಲ್ಲಿ ಈ ಪೋಟೋಗಳನ್ನು ಶೇರ್ ಮಾಡಿಕೊಂಡಿದೆ. ರಾಣಿ ಎಲಿಜಬೆಟ್ ಕುಟುಂಬ ಕೂಡಾ ಈ ಪೋಟೋಗಳನ್ನು ಹಂಚಿಕೊಂಡಿದೆ

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಉದ್ಘಾಟನಾ ಕಾರ್ಯಕ್ರಮದಲ್ಲಿ  ವಿವಿ ರಿಚರ್ಡ್ಸ್, ಅನಿಲ್ ಕುಂಬ್ಳೆ, ಜಾಕೀಸ್ ಕಾಲೀಸ್ , ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಾಲಲಾ ಯೂಸಪ್ ಝೈ ಮತ್ತಿತರರು ಪಾಲ್ಗೊಂಡಿದ್ದರು.

ಉದ್ಘಾಟನಾ ಕಾರ್ಯಕ್ರಮದ ವೇಳೆಯಲ್ಲಿ ಎಲ್ಲಾ ತಂಡಗಳಿಗೂ ಒಂದು ನಿಮಿಷದಲ್ಲಿ ಗರಿಷ್ಠ ರನ್ ಹೊಡೆಯುವ ಆಟವನ್ನು ಆಯೋಜಿಸಲಾಗಿತ್ತು. ಇಂಗ್ಲೆಂಡ್  ಒಂದು ನಿಮಿಷದಲ್ಲಿ 74 ಸ್ಕೋರ್ ನೊಂದಿಗೆ ಮೊದಲ ವಿಜಯಿ ತಂಡವಾಗಿ ಹೊರಹೊಮ್ಮಿತು, ಭಾರತ ಕೇವಲ 19 ಸ್ಕೂರ್ ಗಳಿಸಿತು.

ಇಂಗ್ಲೆಂಡ್ ಒವೆಲ್ ನಲ್ಲಿ ಇಂದು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಣಾ ಉದ್ಘಾಟನಾ ಪಂದ್ಯ ನಡೆಯಲಿದೆ.

SCROLL FOR NEXT