ಈ ಆಟಗಾರ 90 ರನ್ ಗಳಿಸಿದರೆ ವಿಶ್ವಕಪ್ 2019 ರಲ್ಲಿ ಕೊಹ್ಲಿ ಒಡಿಐ ದಾಖಲೆ ಪುಡಿ!
ವಿಶ್ವಕಪ್ 2019 ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿದೆ. ಈ ಬಾರಿ ಸಚಿನ್ ತೆಂಡೂಲ್ಕರ್ ಕಾಮೆಂಟೇಟರ್ ಆಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿಯ ದಾಖಲೆ ಮುರಿಯುತ್ತಾ? ಎಂಬುದು ಮತ್ತೊಂದು ಕುತೂಹಲ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ದಾಖಲೆಯನ್ನು ಸರಿಗಟ್ಟುವುದಕ್ಕೆ ದಕ್ಷಿಣ ಆಫ್ರಿಕಾದ ಪ್ರಾರಂಭಿಕ ಆಟಗಾರ ಹಶೀಮ್ ಆಮ್ಲಾಗೆ ಬೇಕಿರುವುದು ಕೇವಲ 90 ರನ್ ಗಳಷ್ಟೇ.
ಹಶೀಮ್ ಆಮ್ಲಾ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದರೆ, ಒಡಿಐ ಆವೃತ್ತಿಯಲ್ಲಿ ಅತಿ ವೇಗವಾಗಿ 8000 ರನ್ ಪೂರೈಸಿದ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿರಲಿದ್ದಾರೆ.
175 ಇನ್ನಿಂಗ್ಸ್ ಗಳಲ್ಲಿ ಕೋಹ್ಲಿ 8000 ರನ್ ಪೂರೈಸಿದ್ದರೆ, ಹಶೀಮ್ ಆಮ್ಲಾ 171 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos