ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ವಿಂಡೀಸ್ ಮಾರಕ ದಾಳಿಗೆ ಪಾಕ್ ತತ್ತರ, ವೆಸ್ಟ್‌ ಇಂಡೀಸ್ ಗೆ 7 ವಿಕೆಟ್ ಜಯ

ಭರ್ಜರಿ ಲಯದಲ್ಲಿರುವ ವೆಸ್ಟ್‌ ಇಂಡೀಸ್ ಐಸಿಸಿ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳಿಂದ ಗೆದ್ದು ಭರ್ಜರಿ...

ವಿಂಡೀಸ್ ತಂಡ
Lingaraj Badiger
Updated On : 31 May 2019, 11:00 am
ನಾಟಿಂಗ್‌ಹ್ಯಾಮ್: ಭರ್ಜರಿ ಲಯದಲ್ಲಿರುವ ವೆಸ್ಟ್‌ ಇಂಡೀಸ್ ಐಸಿಸಿ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳಿಂದ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಅಲ್ಲದೇ, ತಾವು ಕೂಡ ವಿಶ್ವಕಪ್ ಗೆಲ್ಲುವ ಫೇವರಿಟ್ ಎಂಬ ಎಚ್ಚರಿಕೆ ಸಂದೇಶ ರವಾನಿಸಿದೆ.
ನೀರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ ವೆಸ್ಟ್‌ ಇಂಡೀಸ್‌ಗೆ ಶುಭ ಶುಕ್ರವಾರ ಪಾಕಿಸ್ತಾನ ತಂಡವನ್ನು ಹಸುಳೆಗಳಂತೆ ಕಾಡಿದರು. 
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡ ನಾಯಕ ಜೇಸನ್ ಹೋಲ್ಡರ್ ಯೋಜನೆ ಸಕಾರಗೊಳಿಸುವಲ್ಲಿ ವಿಂಡೀಸ್ ಬೌಲರ್‌ಗಳು ಯಶಸ್ವಿಯಾದರು. ವೆಸ್ಟ್‌ ಇಂಡೀಸ್‌ನ ಜೇಸನ್ ಹೋಲ್ಡರ್, ಓಶಾನ್ ಥಾಮಸ್ ಹಾಗೂ ಆ್ಯಂಡ್ರೆ ರಸೆಲ್ ಅವರ ದಾಳಿ ಎದುರಿಸುವಲ್ಲಿ ವಿಫಲರಾದ  ಪಾಕಿಸ್ತಾನ ಬ್ಯಾಟ್ಸ್‌‌ಮನ್‌ಗಳು ಬಾಲಂಗೋಚಿಗಳಂತೆ ಒಬ್ಬರ ಹಿಂದೆ ಮತ್ತೊಬ್ಬರು ಪೆವಿಲಿಯನ್‌ಗೆ ಪೆರೆಡ್ ನಡೆಸಿದರು.

Advertisement

Advertisement

ಫಖಾರ್ ಜಮಾನ್ ಹಾಗೂ ಬಾಬರ್ ಅಜಾಮ್ ತಲಾ 22 ರನ್ ಗಳಿಸಿದ್ದೇ ಪಾಕ್ ಪರ ವೈಯಕ್ತಿಕ ಗರಿಷ್ಠ ಮೊತ್ತ. ಇವರನ್ನು ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ಹಫೀಜ್ 16 ರನ್ ಹಾಗೂ ವಹಾಬ್ ರಿಯಾಜ್ 18 ರನ್ ಇವರನ್ನು ಬಿಟ್ಟು ಇನ್ನುಳಿದವರು ಎರಡಂಕಿ ದಾಟಲೇ ಇಲ್ಲ. ಅಂತಿಮವಾಗಿ 21.4 ಓವರ್‌ಗಳಲ್ಲಿ ಪಾಕ್ 105 ರನ್‌ಗಳಿಗೆ ಆಲ್‌ಔಟ್ ಆಯಿತು.
ಬಳಿಕ ಗುರಿ ಬೆನ್ನಟ್ಟಿದ ವಿಂಡೀಸ್, ಕ್ರಿಸ್ ಗೇಲ್ ಬಿರುಸಿನ ಅರ್ಧಶತಕದ ನೆರವಿನಿಂದ 13.4 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. ಅಲ್ಲದೆ ಅಂಕಪಟ್ಟಿಯಲ್ಲಿ ಖಾತೆಯನ್ನು ತೆರೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments