ಸಂಗ್ರಹ ಚಿತ್ರ 
ಕ್ರಿಕೆಟ್

ಕೊಹ್ಲಿಯ ದಶಕದ ಹಳೆಯ ಅಪರೂಪದ ದಾಖಲೆ ಮುರಿದ ಶುಭ್ ಮನ್ ಗಿಲ್!

ದಿಯೋಧರ್ ಟ್ರೋಫಿ ಫೈನಲ್‌ ನಲ್ಲಿ ಉದಯೋನ್ಮುಖ ಆಟಗಾರ ಶುಭ್ ಮನ್ ಗಿಲ್ ಕೊಹ್ಲಿ 10 ವರ್ಷಗಳ ಹಿಂದೆ ನಿರ್ಮಿಸಿದ್ದ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ರಾಂಚಿ: ದಿಯೋಧರ್ ಟ್ರೋಫಿ ಫೈನಲ್‌ ನಲ್ಲಿ ಉದಯೋನ್ಮುಖ ಆಟಗಾರ ಶುಭ್ ಮನ್ ಗಿಲ್ ಕೊಹ್ಲಿ 10 ವರ್ಷಗಳ ಹಿಂದೆ ನಿರ್ಮಿಸಿದ್ದ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ರಾಂಚಿಯ ಜೆಕೆಸಿಎ ಇಂಟರ್ನ್ಯಾಷನಲ್ ಕಾಂಪ್ಲೆಕ್ಸ್‌ ನಲ್ಲಿ ಸೋಮವಾರ ನಡೆದ ಭಾರತ 'ಬಿ' ವಿರುದ್ಧದ 47 ನೇ ದಿಯೋಧರ್ ಟ್ರೋಫಿ ಫೈನಲ್‌ನಲ್ಲಿ ಭಾರತ 'ಸಿ' ತಂಡವನ್ನು ಮುನ್ನಡೆಸಿದ 20 ವರ್ಷದ ಶುಬ್ಮನ್ ಗಿಲ್  ವಿರಾಟ್ ಕೊಹ್ಲಿ ಅವರ 10 ವರ್ಷದ ದಾಖಲೆಯನ್ನು ಮುರಿದರು. ದಿಯೋಧರ್ ಟ್ರೋಫಿ ಫೈನಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಶುಬ್ಮನ್ ಗಿಲ್ ಪಾತ್ರರಾದರು. 

ಪಂಜಾಬ್ ಬಲಗೈ ಆಟಗಾರ ಭಾರತದ ನಾಯಕ ವಿರಾಟ್ ಕೊಹ್ಲಿ ಅವರ 10 ವರ್ಷದ ದಾಖಲೆಯನ್ನು ಮುರಿದರು. 2009-10ರಲ್ಲಿ 21 ವರ್ಷ ಮತ್ತು 124 ದಿನ ವಯಸ್ಸಿನವನಾಗಿದ್ದಾಗ ಕೊಹ್ಲಿ ದಿಯೋಧರ್ ಟ್ರೋಫಿ ಫೈನಲ್‌ನಲ್ಲಿ ಉತ್ತರ ವಲಯವನ್ನು ಮುನ್ನಡೆಸಿದ್ದರು. ಕೇವಲ 20 ವರ್ಷ ಮತ್ತು 57 ದಿನಗಳ ಶುಬ್ಮನ್ ಗಿಲ್ ಇದೀಗ ಈ ಸಾಧನೆ ಮಾಡಿ, ಕೊಹ್ಲಿ ದಾಖಲೆ ಮುರಿದಿದ್ದಾರೆ.

20 ವರ್ಷದ ಶುಬ್ಮನ್ ಗಿಲ್, ದಿಯೋಧರ್ ಟ್ರೋಫಿಯ ಫೈನಲ್‌ನಲ್ಲಿ ಒಂದು ತಂಡವನ್ನು ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ನಾಯಕ ವಿರಾಟ್ ಕೊಹ್ಲಿ 2009-10ರಲ್ಲಿ 21 ನೇ ವಯಸ್ಸಿನಲ್ಲಿ ಉತ್ತರ ವಲಯದ ನಾಯಕತ್ವ ವಹಿಸಿದ್ದರು. ಗಿಲ್ ಕೇವಲ 20 ವರ್ಷ ಮತ್ತು 57 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ ಗಳು!

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!

ಎಲ್.ಕೆ. ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!

ವಾರಣಾಸಿ ಎನ್‌ಕೌಂಟರ್‌ನಲ್ಲಿ 30 ಲಕ್ಷ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಹತ್ಯೆ!