ಕ್ರಿಕೆಟ್

ಇಂದೋರ್ ಟೆಸ್ಟ್: 4000 ರನ್ ಗುರಿ ತಲುಪಿದ ಅಜಿಂಕ್ಯ ರಹಾನೆ, ಭೋಜನ ವಿರಾಮಕ್ಕೆ ಟೀಂ ಇಂಡಿಯಾ 188/3

Raghavendra Adiga

ಇಂದೋರ್: ಇಂದೋರ್ ನಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಎರಡನೇ ದಿನದಾಟದಲ್ಲಿ ಪ್ರಾರಂಭದಲ್ಲೇ ನಾಯಕ ವಿರಾಟ್ ಕೊಲ್ಹ್ಲಿ ಔಟ್ ಆಗಿದ್ದರೂ ಭೋಜನ ವಿರಾಮದ ವೇಳೆಗೆ ಭಾರತ 188/3 ರನ್ ಕಲೆಹಾಕಿದೆ. ಪ್ರಾರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ತಮ್ಮ ವೃತ್ತಿಜೀವನದ ಮೂರನೇ ಟೆಸ್ಟ್ ಶತಕದ ಸನಿಹದಲ್ಲಿದ್ದಾರೆ..

ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶವನ್ನು 150 ರನ್‌ಗಳಿಗೆ ಕಟ್ಟಿ ಹಾಕಿದ್ದ ಟೀಂ ಇಂಡಿಯಾ ಸಧ್ಯ  ಈಗ 38 ರನ್‌ಗಳ ಮುನ್ನಡೆ ಹೊಂದಿದೆ

ಭೋಜನ ವಿರಾಮಕ್ಕೆ ಮುನ್ನ ಮಯಾಂಕ್ 91  ರನ್ ೯13 ಬೌಂಡರಿ ಮತ್ತು ಒಂದು ಸಿಕ್ಸರ) ಗಳಿಸಿದ್ದರೆ ಅವರ ಸಹವರ್ತಿ ಚೇತೇಶ್ವರ ಪೂಜಾರ (54)  ಸಹ ಅರ್ಧ ಶತಕ ಗಳಿಸಿದ್ದರು. ಇನ್ನು ಉಪ ನಾಯಕ ಅಜಿಂಕ್ಯ ರಹಾನೆ (35*) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಆದರೆ, ನಾಯಕ ಕೊಹ್ಲಿ ಬ್ಯಾಟಿಂಗ್ ವೀಕ್ಷಣೆಗಾಗಿ ಬಂದಿದ್ದ ಬಹುತೇಕರಿಗೆ ಶುಕ್ರವಾರ ಮುಂಜಾನೆ ನಿರಾಶೆಯಾಗಿದೆ. ಅವರು ಬಾಂಗ್ಲಾದೇಶದ ಅತ್ಯುತ್ತಮ ಬೌಲರ್, ಸೀಮರ್ ಅಬು ಜಯೀದ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದ್ದರು.

4000  ರನ್ ಗುರಿ ಮುಟ್ಟಿದ ಅಜಿಂಕ್ಯ ರಹಾನೆ .

ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ  ಉಪನಾಯಕ ಅಜಿಂಕ್ಯ ರಹಾನೆ  ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್‌ಗಳ ಗುರಿ ಮುಟ್ಟಿವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

ಇಂದೋರ್ ಟೆಸ್ಟ್ ನ ಎರಡನೇ ದಿನದಾತದಲ್ಲಿ ರಹಾನೆ ಈ ಸಾಧನೆ ಮಾಡಿದ್ದು ಇಂತಹಾ ದಾಖಲೆ ಬರೆದ್ ಭಾರತದ  16ನೇ ಬ್ಯಾಟ್ಸ್‌ಮನ್ ಇವರಾಗಿದ್ದಾರೆ. ಇದರೊಡನೆ ಟೀಂ ಇಂಡಿಯಾ ಮಾಜಿ ಆಟಗಾರರಾದ  ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಣಣ್ ದಾಖಲೆ ಸರಿಗಟ್ಟಿದ್ದಾರೆ.

SCROLL FOR NEXT