ಕ್ರಿಕೆಟ್

ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮಾ ರಾಜೀನಾಮೆ

Lingaraj Badiger

ನವದೆಹಲಿ: ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಅಧ್ಯಕ್ಷ ಸ್ಥಾನಕ್ಕೆ  ಶನಿವಾರ ರಾಜೀನಾಮೆ ನೀಡಿದ್ದಾರೆ.

ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಕಾಣಿಸಿಕೊಂಡಿರುವ ಬಿಕ್ಕಟ್ಟು ಹಾಗೂ ಸಂಸ್ಥೆಯೊಳಗಿನ ಒತ್ತಡ ಮತ್ತು ಜಿದ್ದಾಜಿದ್ದಿಯ ಕಾರಣಗಳಿಂದಾಗಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ರಜತ್ ಶರ್ಮಾ ಹೇಳಿದ್ದಾರೆ.

ಈ ಕ್ರಿಕೆಟ್ ಸಂಸ್ಥೆಯಲ್ಲಿ ಕ್ರಿಕೆಟ್‌ಗಿಂತಲೂ ಸ್ವಹಿತಾಸಕ್ತಿಯೇ ಹೆಚ್ಚು ಕಾರ್ಯೋನ್ಮುಖವಾಗಿರುವಂತೆ ನನ್ನ ಅನುಭವಕ್ಕೆ ಬಂದಿದೆ. ನನ್ನ ಪ್ರಮಾಣಿಕತೆ ಮತ್ತು ಪಾರದರ್ಶಕ ಸಿದ್ಧಾಂತಗಳೊಟ್ಟಿಗೆ ಡಿಡಿಸಿಎನಲ್ಲಿ ನಾನು ಮುಂದುವರಿಯಲು ಬಹುಶಃ ಸಾಧ್ಯವಾಗುವುದಿಲ್ಲ. ಪ್ರಮಾಣಿಕತೆ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಶರ್ಮಾ ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವ ದಿ. ಅರುಣ್‌ ಜೇಟ್ಲಿ ಅವರ ಬೆಂಬಲದೊಂದಿಗೆ ಶರ್ಮಾ ಕ್ರಿಕೆಟ್‌ ಮಂಡಳಿಗೆ ಸೇರ್ಪಡೆಯಾಗಿದ್ದರು. ಆದರೆ, ಜೇಟ್ಲಿ ಅವರ ನಿಧನದ ಬಳಿಕ ಡಿಡಿಸಿಎನಲ್ಲಿ ಶರ್ಮಾ ಅವರು ನೆಲೆ ಕಳೆದುಕೊಂಡಿದ್ದರು ಎಂದು ಕ್ರಿಕೆಟ್‌ ಮಂಡಳಿಯ ಸದಸ್ಯರು ಹೇಳುತ್ತಾರೆ.

SCROLL FOR NEXT