ವೇದಾ ಕೃಷ್ಣಮೂರ್ತಿ 
ಕ್ರಿಕೆಟ್

ಆಸೀಸ್ ಪ್ರವಾಸಕ್ಕೆ ಭಾರತ ಎ ಮಹಿಳಾ ತಂಡ ಪ್ರಕಟ, ವೇದಾ ಕೃಷ್ಣಮೂರ್ತಿ ನಾಯಕಿ

ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆ 15 ಸದಸ್ಯೆಯರ ಭಾರತ ಎ ಮಹಿಳಾ ತಂಡವನ್ನು ಅಖಿಲ ಭಾರತೀಯ ಮಹಿಳಾ ಆಯ್ಕೆ ಸಮಿತಿ ಪ್ರಕಟಿಸಿದ್ದು, ವೇದಾ ಕೃಷ್ಣಮೂರ್ತಿ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ.

ಕೋಲ್ಕತಾ: ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆ 15 ಸದಸ್ಯೆಯರ ಭಾರತ ಎ ಮಹಿಳಾ ತಂಡವನ್ನು ಅಖಿಲ ಭಾರತೀಯ ಮಹಿಳಾ ಆಯ್ಕೆ ಸಮಿತಿ ಪ್ರಕಟಿಸಿದ್ದು, ವೇದಾ ಕೃಷ್ಣಮೂರ್ತಿ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಆತಿಥೇಯರ ವಿರುದ್ಧ ಭಾರತ ವನಿತೆಯರು ಮೂರು ಏಕದಿನ ಪಂದ್ಯಗಳು ಹಾಗೂ ಹಲವು ಟಿ-20 ಪಂದ್ಯಗಳಲ್ಲಿ ಸೆಣಸಲಿದ್ದಾರೆ. ಆಫ್ ಸ್ಪಿನ್ನರ್ ಅನುಜಾ ಪಾಟೀಲ್ ಉಪನಾಯಕಿ ಜವಾಬ್ದಾರಿಯ ಹೊಣೆ ನೀಡಲಾಗಿದೆ.

ಪ್ರವಾಸಕ್ಕೆ ಇಬ್ಬರು ವಿಕೆಟ್ ಕೀಪರ್‍ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸುಷ್ಮಾ ವರ್ಮಾ ಹಾಗೂ ನುಝತ್ ಪರ್ವೀನ್ ಅವರು ಪಂದ್ಯದಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಭಾರತ ಮಹಿಳಾ ತಂಡ
ವೇದಾ ಕೃಷ್ಣಮೂರ್ತಿ (ನಾಯಕಿ), ಅನುಜಾ ಪಾಟೀಲ್ (ಉಪ ನಾಯಕಿ), ಪ್ರಿಯಾ ಪೂನಿಯಾ, ಶಫಾಲಿ ವರ್ಮಾ, ಹರ್ಲೀನ್ ಡಿಯೊಲ್, ದೇವಿಕಾ ವೈದ್ಯ, ಡಿ.ಹೇಮಲತಾ, ತನುಶ್ರೀ ಸರ್ಕಾರ್, ಸುಷ್ಮಾ ವರ್ಮಾ(ವಿ.ಕೀ), ನುಝತ್ ಪರ್ವೀನ್ (ವಿ.ಕೀ), ಮಾನಸಿ ಜೋಷಿ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಮನಾಲಿ ದಾಕ್ಷಿಣಿ, ಟಿ.ಪಿ ಕನ್ವರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!