ಕ್ರಿಕೆಟ್

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಸಿಸಿಬಿನಿಂದ ಅಂಪೈರ್ ವಿಚಾರಣೆ

Raghavendra Adiga

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಫಿಕ್ಸಿಂಗ್ ಪ್ರಕರಣದ ನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ಶಾಖೆಯ (ಸಿಸಿಬಿ) ಅಧಿಕಾರಿಗಳು ತನಿಖೆಯ ಭಾಗವಾಗಿ ಅಂಪೈರ್ ಗಳನ್ನು ಪ್ರಶ್ನಿಸಿದ್ದಾರೆ.

ಫಿಕ್ಸಿಂಗ್ ನಡೆದಿದ್ದ ವೇಳೆ ಅಂಪೈರ್ ಆಗಿದ್ದ ಬಿ.ಕೆ.ರವಿ ಅವರನ್ನು ಶುಕ್ರವಾರ ಸಿಸಿಬಿ ಪೊಲೀಸರು ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಕೆಲವು ಪಂದ್ಯಗಳಿಗೆ ರವಿ ಮೂರನೇ ಅಂಪೈರ್ ಆಗಿ ಕೆಲಸ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂಡರ್ -23 ಇಂಡಿಯಾ ನಾಯಕ ರವಿಯ ಮಗ ಬಿ.ಆರ್.ಶರತ್ ಬೆಂಗಳೂರು ಬ್ಲಾಸ್ಟರ್ಸ್ ಕೆಪಿಎಲ್ ತಂಡದ ಆಟಗಾರನಾಗಿದ್ದು, ತನಿಖೆಯ ಭಾಗವಾಗಿ ಪೊಲೀಸರು ಆತನನ್ನು ಕರೆಸಿಕೊಳ್ಳಲಿದ್ದಾರೆ.ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಆಟಗಾರರು ಮತ್ತು ಕೋಚ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

SCROLL FOR NEXT