ಕ್ರಿಕೆಟ್

ಪಿಂಕ್ ಬಾಲ್ ಟೆಸ್ಟ್ : ಎಂ.ಎಸ್ ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ

Nagaraja AB

ಕೋಲ್ಕತಾ: ಏಳು ಟೆಸ್ಟ್‌ ಪಂದ್ಯಗಳಲ್ಲಿ ಯಶಸ್ವಿಯಾಗಿ ಜಯ ಸಾಧಿಸಿದ ಭಾರತದ ಮೊದಲ ನಾಯಕ ಎಂಬ ದಾಖಲೆಯನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು  ಮಾಡಿದರು.

ಇಲ್ಲಿನ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಇನಿಂಗ್ಸ್‌ ಹಾಗೂ 46 ರನ್ ಗಳಿಂದ ಜಯ ಸಾಧಿಸಿದ ಬಳಿಕ ಕೊಹ್ಲಿ, ಈ ಸಾಧನೆಗೆ ಭಾಜನರಾದರು. ಇದರೊಂದಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ವಿರಾಟ್ ಮುರಿದರು. 

2013ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆರು ಟೆಸ್ಟ್‌ ಪಂದ್ಯಗಳನ್ನು ಯಶಸ್ವಿಯಾಗಿ ಗೆದ್ದಿದ್ದರು. ಚೊಚ್ಚಲ ಪಿಂಕ್ ಟೆಸ್ಟ್‌ ಗೆದ್ದು ಬಳಿಕ ಭಾರತ  ಮತ್ತೊಂದು  ಮೈಲುಗಲ್ಲು ಸ್ಥಾಪಿಸಿತು. ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಇನಿಂಗ್ಸ್‌ ಜಯ ಸಾಧಿಸಿದ ವಿಶ್ವದ ಮೊದಲ ತಂಡ ಎಂಬ ಸಾಧನೆಗೆ ಭಾನುವಾರ ಟೀಮ್ ಇಂಡಿಯಾ ಭಾಜನವಾಯಿತು.

SCROLL FOR NEXT